ದೈವಸ್ಥಾನದ ಬಾಗಿಲು ಮುರಿದು 51ಸಾವಿರ ರೂ.ಮೌಲ್ಯದ ಸಾಮಗ್ರಿ ಕಳವು ಗೈದ ಕಳ್ಳರು!

Share the Article

ಉಡುಪಿ :ತುಳುನಾಡ ಕಾರ್ಣಿಕ ದೈವಸ್ಥಾನಕ್ಕೆ ಕಳ್ಳರು ನುಗ್ಗಿ ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಬಾಳಟ್ಟು ಬೀಡು ಎಂಬಲ್ಲಿ ನಡೆದಿದೆ.

ಬ್ರಹ್ಮಗಿರಿಯ ಪ್ರಥ್ವಿರಾಜ ಶೆಟ್ಟಿ ಎಂಬವರ ಕುಟುಂಬದ ಮನೆಯ ಆವರಣದಲ್ಲಿರುವ ದೈವದ ಮನೆಯ ಬಾಗಿಲು ಚಿಲಕವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು, 51 ಸಾವಿರ ರೂ. ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೊಗಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply