ಕಾಣಿಯೂರು : ರೈಲು ಹಳಿಯಲ್ಲಿ ಬೆಳಂದೂರಿನ ಯುವಕನ ಶವ ಪತ್ತೆ

Share the Article

ಕಡಬ : ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರು ಬಳಿಯ ರೈಲ್ವೇ ಟ್ರ್ಯಾಕ್‌ ನಲ್ಲಿ ಯುವಕನೊಬ್ಬನ ಮೃತದೇಹವೊಂದು ಏ. 29ರ ಬೆಳಿಗ್ಗೆ ಪತ್ತೆಯಾಗಿದೆ.

ಬೆಳಂದೂರು ಗ್ರಾಮದ ಅಬೀರ ನಿವಾಸಿ ದಿ.ರಾಮಯ್ಯ ಪೂಜಾರಿ ಮಬವರ ಪುತ್ರ ದಿವಾಕರ ಪೂಜಾರಿ(40ವ) ಎಂಬವರ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ 8 ವರ್ಷದ ಪುತ್ರಿಯನ್ನು ಆಗಲಿದ್ದಾರೆ.

ಮೃತ ದೇಹವು ಬೆಳಂದೂರು ಗ್ರಾಮದ ಅಗಳಿ ಎಂಬಲ್ಲಿ ರೈಲ್ವೆ ಹಳಿಗಳ ಮೇಲೆ ಬಿದ್ದಿತ್ತು.

ನಿನ್ನೆ ಸಂಜೆಯಿಂದ ಅವರು ಮನೆಯಿಂದ ನಾಪತ್ತೆಯಾಗಿದ್ದು , ಮನೆಯವರು ಹಾಗೂ ಕುಟುಂಬ ಸದಸ್ಯರು ರಾತ್ರಿಯಿಂದಲೇ ಅವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಅವರ ಮೃತ ದೇಹ ಅವರ ಮೃತದೇಹ ರೈಲ್ವೆ ಟ್ರ್ಯಾಕ್‌ ಬಳಿ ಪತ್ತೆಯಾಗಿದೆ.

Leave A Reply