Home Interesting ತನ್ನ 9 ಹೆಂಡತಿಯರನ್ನು ಖುಷಿಪಡಿಸಲು ‘ಸೆಕ್ಸ್ ಟೈಮ್​ಟೇಬಲ್’ ಸಿದ್ಧಪಡಿಸಿ ‘ ವರ್ಕ್’ ಮಾಡುತ್ತಿರುವ ಮಾಡೆಲ್

ತನ್ನ 9 ಹೆಂಡತಿಯರನ್ನು ಖುಷಿಪಡಿಸಲು ‘ಸೆಕ್ಸ್ ಟೈಮ್​ಟೇಬಲ್’ ಸಿದ್ಧಪಡಿಸಿ ‘ ವರ್ಕ್’ ಮಾಡುತ್ತಿರುವ ಮಾಡೆಲ್

Hindu neighbor gifts plot of land

Hindu neighbour gifts land to Muslim journalist

ವಾಷಿಂಗ್ಟನ್: ಇಂಡಸ್ಟ್ರಿ ಗಳಲ್ಲಿ ಸಿಬ್ಬಂದಿಗೆ ಕೆಲಸದ ಅವಧಿಯನ್ನು ಶಿಫ್ಟ್​ ಮಾದರಿಯಲ್ಲಿ ರೂಪಿಸಲಾಗಿರುತ್ತದೆ. ಅದೇ ಮಾದರಿಯಲ್ಲಿ, ಇಲ್ಲೊಬ್ಬ ತನ್ನ 9 ಪತ್ನಿಯರ ಜೊತೆಗಿನ ಲೈಂಗಿಕ ಕ್ರಿಯೆಗಾಗಿ ‘ಸೆಕ್ಸ್​ ಟೈಮ್​ಟೇಬಲ್’ ರೆಡಿ ಮಾಡಿಕೊಂಡು ‘ ವರ್ಕ್’ ಮಾಡುತ್ತಿದ್ದಾನೆ.

ಬ್ರೆಜಿಲ್​ನ ಮಾಡೆಲ್​ ಆರ್ಥರ್​ ಒ ಉರ್ಸೊ ಎಂಬಾತನೇ ಈ ‘ವಿಶೇಷ ವೇಳಾಪಟ್ಟಿ’ಯ ನಿರ್ಮಾತೃ. ಮಾಡೆಲ್​ ಕೂಡಾ ಆಗಿರುವ ಆರ್ಥರ್​ 9 ಮಹಿಳೆಯರ ಮಹಾ ಪತಿ.
ತನಗೆ ಬಹುಪತ್ನಿತ್ವ ಇಷ್ಟ ಎಂದು 2011ರಲ್ಲಿ 8 ಯುವತಿಯರನ್ನು ಏಕಕಾಲಕ್ಕೆ ಮದುವೆಯಾಗಿ ಸುದ್ದಿಯಾಗಿದ್ದ ಆತ. ಅದಕ್ಕೂ ಮೊದಲೇ ಒಬ್ಬಾಕೆಯನ್ನು ಆತ ಧರ್ಮಪತ್ನಿಯನ್ನಾಗಿ ಮಾಡಿಕೊಂಡಿದ್ದ.

ಮದುವೆಯೇ ನೋ ಆಯ್ತು, ನಂತರ ರಾತ್ರಿ ಹಗಲು ಗಳಲ್ಲಿ ಆ ಯುವತಿಯರನ್ನು ಆತ ಖುಷಿ ಪಡಿಸಬೇಕಲ್ಲ ?! ಅದೇ ದೊಡ್ದ ಚಾಲೆಂಜ್ ಆಗಿತ್ತು ಆತನಿಗೆ. ಈಗ ಆ ಒಂಬತ್ತು ಹೆಂಡತಿಯರನ್ನು ಹೇಗೆ ಖುಷಿಪಡಿಸುತ್ತಿದ್ದೇನೆ ಎಂಬ ವಿಚಾರ ಬಹಿರಂಗಪಡಿಸುವ ಮೂಲಕ ಆತ ಸುದ್ದಿಯಾಗಿದ್ದಾನೆ.

ತಮ್ಮ ಪ್ರತಿಯೊಬ್ಬ ಹೆಂಡತಿಯನ್ನು ಸಂತೋಷವಾಗಿಡಲು ‘ಸೆಕ್ಸ್ ಟೈಮ್ ಟೇಬಲ್’ ಅನ್ನು ರೂಪಿಸಿರುವುದಾಗಿ ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಒ ಉರ್ಸೊ ಆತ ಹೇಳಿಕೊಂಡಿದ್ದಾನೆ. ಮನೆಗೆ ಬಂದರೆ ಅವತ್ತು ಯಾರ ಜೊತೆ ಮಲಗಬೇಕು ಎಂಬುದು ಆತನಿಗೆ ಕನ್ಫ್ಯೂಸ್ ಆಗ್ತಿತ್ತು. ಎಲ್ಲ ಹೆಂಡತಿಯರು ಕೂಡಾ ಆತನತ್ತ ಆಸೆ ಕಣ್ಣುಗಳಿಂದ ನೋಡ್ತಿದ್ದರು ಮತ್ತು ಸೆಕ್ಸ್ ನ ಬಯಕೆಯಿಂದ ಆತನ ತೋಳು ಜಗ್ಗುತ್ತಿದ್ದರು.

ಈ ಸಮಸ್ಯೆ ಬಗೆಹರಿಸಲು ತನ್ನ ಒಂಬತ್ತು ಸಂಗಾತಿಗಳೊಂದಿಗೆ ದಾಂಪತ್ಯವನ್ನು ಬಲಪಡಿಸಲು ಮತ್ತು ಸಮಾನವಾಗಿ ಸರ್ವರಿಗೂ ಸಮಯ ನೀಡಲು ಎಲ್ಲರನ್ನೂ ಖುಷಿಪಡಿಸಲು ಸೆಕ್ಸ್ ಟೈಮ್ ಟೇಬಲ್ ಅನ್ನು ಆತ ಸಿದ್ಧಪಡಿಸಿದ್ದಾನೆ. ಹೀಗಾಗಿ ಸರತಿಯ ಪ್ರಕಾರ ಆತನ ಪ್ರತಿಯೊಬ್ಬ ಪತ್ನಿಗೂ ಕೂಡಾ ಸೆಕ್ಸ್ ಸಿಗುವಂತಾಗುತ್ತದೆ.

“ಈ ಸೆಕ್ಸ್ ವೇಳಾಪಟ್ಟಿಯನ್ನು ಅನುಸರಿಸುವುದು ಬಹಳಷ್ಟು ಕಷ್ಟವಾಯಿತು. ಮತ್ತು ಕೆಲವೊಮ್ಮೆ ನಾನು ಇಷ್ಟ ಇಲ್ಲದಿದ್ದರೂ ವೇಳಾಪಟ್ಟಿಯ ಕಾರಣದಿಂದ ಕಡ್ಡಾಯವಾಗಿ ಸೆಕ್ಸ್ ಮಾಡಬೇಕಾಗಿ ಬಂತು ಎಂದು ನನಗೆ ಅನಿಸಿತು” ಎಂದು ಆರ್ಥರ್ ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.