ಕಾಶ್ಮೀರ ಭೇಟಿ ವೇಳೆ ಪ್ರಧಾನಿ ಮೋದಿ ಹತ್ಯೆಗೆ ಸಂಚು | ಆತ್ಮಹತ್ಯಾ ದಾಳಿಗೆ ಸಿದ್ದರಾಗಿದ್ದ ಉಗ್ರರು

Share the Article

ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ನಲ್ಲಿ ಹತರಾದ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಆತ್ಮಹತ್ಯಾ ದಾಳಿಗೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಪ್ರಧಾನಿ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಇನ್ನೆರಡು ದಿನಗಳಿದ್ದು ಈ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಕಾರ್ಯಾಚರಣೆ ಮುಕ್ತಾಯಗೊಳಿಸಿದ ಬಳಿಕ ಮಾತನಾಡಿರುವ ಪೊಲೀಸ್ ಅಧಿಕಾರಿ, ಜಮ್ಮುವಿನ ಹೊರವಲಯದಲ್ಲಿರುವ ಸುಂಜ್ವಾನ್‌ನಲ್ಲಿರುವ ಸೇನಾ ಶಿಬಿರದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಿಐಎಸ್‌ಎಫ್‌ನ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಸಹ ಸಾವನ್ನಪ್ಪಿದ್ದರೆ, ಒಂಬತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಿಂದ ನುಸುಳಿದ ನಂತರ ಇಬ್ಬರು ಭಯೋತ್ಪಾದಕರು ಗುರುವಾರ ಜಮ್ಮು ನಗರದ ಹೊರವಲಯವನ್ನು ಪ್ರವೇಶಿಸಿ ಸೇನಾ ಶಿಬಿರದ ಸಮೀಪವಿರುವ ಪ್ರದೇಶದಲ್ಲಿ ತಂಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಭಯೋತ್ಪಾದಕರು ಪ್ರಧಾನಿ ಭೇಟಿ ವೇಳೆ ವಿಧ್ವಂಸಕ ಕೃತ್ಯ ಎಸಗಲು ಯೋಜಿಸಿದ್ದರು, ಅಂತೆಯೇ ಆತ್ಮಹತ್ಯಾ ದಾಳಿಗೆ ಪೂರಕವಾಗುವ ಉಡುಪನ್ನು ಸೊಂಟಕ್ಕೆ ಧರಿಸಿದ್ದರು, ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Leave A Reply