ಮೊಬೈಲ್ ಫೋನಿನಲ್ಲಿ ಇನ್ನು ಮುಂದೆ ಕಾಲ್ ರೆಕಾರ್ಡಿಂಗ್‌ಗಿಲ್ಲ ಅವಕಾಶ! : ಗೂಗಲ್ ಸಂಸ್ಥೆಯಿಂದ ಹೊಸ ಕ್ರಮ!!!

Share the Article

ಗೂಗಲ್ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದ್ದು. ಇತ್ತೀಚಿನ ಬೆಳವಣಿಗೆಯಲ್ಲಿ ಅದು ಕಾಲ್ ರೆಕಾರ್ಡಿಂಗ್ ಆಯಪ್‌ಗಳನ್ನು ತೆಗೆದುಹಾಕುವ ಕ್ರಮ ಕೈಗೊಂಡಿದೆ.

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು, ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳಲೆಂದು ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದಾದರೂ ಆಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ, ಇನ್ನು ಮುಂದೆ ಗೂಗಲ್ ಅದಕ್ಕೆ ಅವಕಾಶ ನೀಡುವುದಿಲ್ಲ.

ಕ್ಸಿಯೋಮಿ, ಸ್ಯಾಮ್‌ಸಂಗ್‌ನಂತಹ ಕೆಲವು ಸಂಸ್ಥೆಗಳು ಮೊಬೈಲ್‌ನಲ್ಲೇ ರೆಕಾರ್ಡಿಂಗ್ ಆಯ್ಕೆಯನ್ನು ಕೊಟ್ಟಿವೆ. ಆದರೆ ಕೆಲವು ಸಂಸ್ಥೆಯ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ರೆಕಾರ್ಡಿಂಗ್ ಆಯ್ಕೆಯಿಲ್ಲ. ಅಂತವರು ಪ್ಲೇ ಸ್ಟೋರ್‌ನಿಂದ ಕಾಲ್ ರೆಕಾರ್ಡಿಂಗ್ ಆಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.

ಇದೀಗ ಅಂತಹ ಎಲ್ಲ ಥರ್ಡ್ ಪಾರ್ಟಿ ಆಯಪ್‌ನ್ನು ತೆಗೆದುಹಾಕಲು ಗೂಗಲ್ ಮುಂದಾಗಿದೆ. ಮೇ 11ರಿಂದ ಈ ರೀತಿಯ ಯಾವುದೇ ರೆಕಾರ್ಡಿಂಗ್ ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ಗೂಗಲ್ ಸಂಸ್ಥೆಯು “ಗೂಗಲ್ ಪ್ಲೇ ಪಾಲಿಸಿ ಅಪ್‌ಡೇಟ್ಸ್’ ವೆಬಿನಾರ್‌ನಲ್ಲಿ ತಿಳಿಸಿದೆ.

Leave A Reply