ಹಿಂದೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ-ಎಂ.ಬಿ.ಪಾಟೀಲ್

Share the Article

ಬಾಗಲಕೋಟೆ : ಕೋಮು ಭಾವನೆ ಕೆರಳಿಸುವ ಹಿಂದೂ ಸಂಘಟನೆಗಳ ನಿಷೇಧಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.

ಸನಾತನ ಧರ್ಮ ಸಂಘಟನೆ, ಆರ್ ಎಸ್ಎಸ್ ವಿಶ್ವ ಹಿಂದೂ ಪರಿಷತ್, ಬಜರಂಗದಳ ನಿಷೇಧಿಸಿ ಎಂದು ಅವರು ಆಗ್ರಹಿಸಿದ್ದಾರೆ.

ಸರಕಾರ ಸನಾತನ ಧರ್ಮ ಸಂಘಟನೆಯನ್ನು ನಿಷೇಧಿಸಬೇಕು. ಎಸ್ ಡಿಪಿಐ ,ಪಿಎಫ್ ಐ ಜೊತೆಗೆ ಸನಾತನ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಆರ್ ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಆರೆಸ್ಸೆಸ್ಸಿಗರು ಬ್ರಿಟಿಷರ ಏಜೆಂಟ್ ಆಗಿದ್ದರು ಎಂದು ಆರೋಪಿಸಿದರು.

ಜನರಲ್ಲಿ ಕೋಮು ಭಾವನೆ ಬಿತ್ತಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆರ್ ಎಸ್ಎಸ್ ಹಿನ್ನೆಲೆ ಜಗತ್ತಿಗೆ ಗೊತ್ತಿದೆ ಎಂದು ಕಿಡಿಕಾರಿದರು.

Leave A Reply