Home News ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಎಂದು ಬಿಂಬಿತವಾಗಿದ್ದ ಪ್ರಕರಣ ಸುಖಾಂತ್ಯ !!?...

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಎಂದು ಬಿಂಬಿತವಾಗಿದ್ದ ಪ್ರಕರಣ ಸುಖಾಂತ್ಯ !!? | ಅಷ್ಟಕ್ಕೂ ಹೈಕೋರ್ಟ್ ಈ ಪ್ರಕರಣದ ಕುರಿತು ಹೇಳಿದ್ದೇನು ಗೊತ್ತಾ ??

Hindu neighbor gifts plot of land

Hindu neighbour gifts land to Muslim journalist

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಜೋಯಿಸ್ನಾ ಮೇರಿ ಜೋಸೆಫ್ ಮತ್ತು ಶೆಜಿನ್ ನಡುವಿನ ಅಂತರ್ಧರ್ಮೀಯ ಮದುವೆಯಲ್ಲಿ ಮಧ್ಯಪ್ರವೇಶ ಮಾಡಲು ಕೇರಳ ಹೈಕೋರ್ಟ್ ನಿರಾಕರಿಸಿದ್ದು, ಉದ್ದೇಶಪೂರ್ವಕ, ಒಪ್ಪಿತ ಮದುವೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಸದಸ್ಯ ಶೆಜಿನ್ ಮತ್ತು ಕ್ರಿಶ್ಚಿಯನ್ ಮಹಿಳೆ ಜೋಯಿಸ್ನಾ ಮೇರಿ ಜೋಸೆಫ್ ಮದುವೆ ಕೇರಳ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಇದನ್ನು ಲವ್ ಜಿಹಾದ್ ಎಂದು ವಿವಾದ ಸೃಷ್ಟಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಯುವತಿ ಜೋಯಿಸ್ನಾ ಮೇರಿ ಜೋಸೆಫ್ ತಂದೆ ಕೇರಳ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಈ ಅರ್ಜಿಯನ್ನು ನ್ಯಾ.ವಿ.ಜಿ ಅರುಣ್ ಮತ್ತು ನ್ಯಾ. ಸಿ.ಎಸ್ ಸುಧಾ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತ್ತು. ತಂದೆ ಸಲ್ಲಿಸಿದ್ದ ಅರ್ಜಿಗೆ ಅಫಿಡವಿಟ್ ಸಲ್ಲಿಸಿದ್ದ ಜೋಯಿಸ್ನಾ ಮೇರಿ ಜೋಸೆಫ್ ತಾವು ಸ್ವಇಚ್ಛೆಯಿಂದ ಮದುವೆಯಾಗಿದ್ದು ಒತ್ತಾಯಪೂರ್ವಕವಾಗಿ ಬಂಧಿಯಾಗಿಲ್ಲ. ತನ್ನಿಷ್ಟದಂತೆ ಮದುವೆಯಾಗಿದೆ ಎಂದು ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಹೇಳಿಕೆ ಪರಿಶೀಲಿಸಿದ ಕೋರ್ಟ್ ಒಪ್ಪಿತ ಮದುವೆಗಳಲ್ಲಿ ಮಧ್ಯಪ್ರದೇಶ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥ ಪಡಿಸಿತು.

ಯುವತಿಯು ಶೆಜಿನ್ ಜೊತೆಗೆ ಒಪ್ಪಿಗೆಯೊಂದಿಗೆ ಮದುವೆಯ ಬಂಧನ ಹೊಂದಿದ್ದು, ಒತ್ತಾಯಪೂರ್ವಕವಾಗಿ ಅಲ್ಲ ಎಂದಿದ್ದಾರೆ. ಮತ್ತು ಅವರು ಹೆತ್ತವರೊಂದಿಗೆ ಸದ್ಯ ಸಂಪರ್ಕ ಹೊಂದಲು ನಿರಾಕರಿಸಿದ್ದಾರೆ. ಉದ್ದೇಶಿತ ವಿವಾಹದ ಸೂಚನೆಯ ಪ್ರತಿಯನ್ನು ವಿವಾಹ ಅಧಿಕಾರಿ, ಕೋಲಂಚೇರಿ ಅವರಿಗೆ ಸಲ್ಲಿಸಲಾಗಿದೆ.

ನಾವು ಅರ್ಥಮಾಡಿಕೊಂಡಂತೆ, ಅವಳು ಜಗತ್ತನ್ನು ನೋಡಿದ 26 ವರ್ಷದ ಯುವತಿ, ಅವಳು ವಿದೇಶದಲ್ಲಿ ಕೆಲಸ ಮಾಡಿ ಹಿಂತಿರುಗಿದ್ದಳು. ಅವಳು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಇದರಲ್ಲಿ ಯಾವುದೇ ಅಕ್ರಮ ಬಂಧನವಿಲ್ಲ ಎಂದು ಮನವರಿಕೆ ಮಾಡಿಕೊಂಡು, ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.