ಸಂಜಯ್ ದತ್ ಅವರು ಡ್ರಗ್ಸ್ ತೆಗೆದುಕೊಂಡಿದ್ದು ಏಕೆ ? ನಂತರ ಆದದ್ದು ಏನು ?
ಸಂಜಯ್ ದತ್ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಸಂಗತಿ ಮತ್ತು ಅವರು ಜೈಲಿಗೆ ಹೋಗಿ ಬಂದ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಅನಾರೋಗ್ಯದಿಂದ ಬಳಲಿ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಈ ಕುರಿತು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅವರು ಮುಕ್ತವಾಗಿ ಮಾತನಾಡಿ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತು ಡ್ರಗ್ಸ್ ನ ದುಷ್ಪರಿಣಾಮ ಮತ್ತು ಭಯಾನಕತೆಯ ಕುರಿತು ಎಚ್ಚರಿಕೆ ನೀಡಿದ್ದಾರೆ.
ನಾನು ಆ ಸಮಯದಲ್ಲಿ ಹುಡುಗಿಯರ ಜತೆ ಮಾತನಾಡಲು ಭಯ ಪಡುತ್ತಿದ್ದೆ. ನಾನು ತುಂಬಾ ನಾಚಿಕೆ ಸ್ವಭಾವದವನು. ಹುಡುಗಿಯರ ಜನತೆ ಮಾತನಾಡಲು ಆಗುತ್ತಿರಲಿಲ್ಲ. ಹೀಗಾಗಿ ನಾನು ಡ್ರಗ್ಸ್ ತೆಗೆದುಕೊಳ್ಳಲು ಆರಂಭಿಸಿದೆ. ಡ್ರಗ್ಸ್ ನನನ್ನು ‘ಕೂಲ್’ ಆಗಿ ಕಾಣುವಂತೆ ಮಾಡುತ್ತಿತ್ತು. ಅಲ್ಲದೆ, ಸ್ವಲ್ಪ ಧೈರ್ಯವನ್ನು ನೀಡುತ್ತಿತ್ತು. ಹುಡುಗಿಯರೊಂದಿಗೆ ಮಾತನಾಡಲು ಮತ್ತು ಪ್ರಭಾವ ಬೀರಲು ಡ್ರಗ್ಸ್ ಬಳಸುತ್ತಿದ್ದೆ ಎಂದು ಹೇಳಿದ್ದಾರೆ.
ನಾನು ಡ್ರಗ್ಸ್ಗೆ ವ್ಯಸನಿಯಾದೆ. ಅದರಿಂದ ಹೊರ ಬರಲು ಎಷ್ಟು ಕಷ್ಟ ಎಂದು ನನಗೆ ತಿಳಿದಿತ್ತು. ನಾನು ನನ್ನ ಜೀವನದ ಹತ್ತು ವರ್ಷಗಳನ್ನು ಲಿವಿಂಗ್ ರೂಮ್ ಅಥವಾ ಶೌಚಗೃಹದಲ್ಲಿ ಕಳೆದಿದ್ದೇನೆ. ಅಲ್ಲದೆ, ಶೂಟಿಂಗ್ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡಿದ್ದೆ. ಯಾವಾಗಲೂ ಒಂಟಿಯಾಗಿರುತ್ತಿದೆ. ಡ್ರಗ್ಸ್‌ನ ಪರಿಣಾಮದಿಂದ ಚೇತರಿಸಿಕೊಳ್ಳಲು ನಾನು ದೀರ್ಘಕಾಲ ಪುನರ್ವಸತಿ ಕೇಂದ್ರದಲ್ಲಿ ಇರಬೇಕಾಯಿತು ಎಂದು ಹಿಂದಿನ ಕಹಿ ಘಟನೆಗಳನ್ನು ಮೆಲುಕು ಹಾಕಿದರು.