ಕಿಚಡಿಯಲ್ಲಿ ಉಪ್ಪು ಹೆಚ್ಚಾಯಿತೆಂದು ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಗಂಡ!!

Share the Article

ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅನ್ನೋ ಮಾತಿದೆ. ಆದ್ರೆ ಇಲ್ಲೊಂದು ಕಡೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸಾವಿನಲ್ಲಿ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ನಡೆದಿದೆ.

ಬೆಳಗ್ಗಿನ ಉಪಹಾರದಲ್ಲಿ ಉಪ್ಪು ಜಾಸ್ತಿಯಾಯ್ತು ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನೇ ಕೊಂದಿದ್ದಾನೆ.ಬೆಳಗ್ಗೆ ನಿರ್ಮಲಾ ತನ್ನ ಪತಿಗೆ ತಿಂಡಿಗೆ ಕಿಚಡಿ ನೀಡಿದ್ದು,ಅದರಲ್ಲಿ ಸ್ವಲ್ಪ ಉಪ್ಪು ಹೆಚ್ಚಾಗಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡ ಪತಿ ನೀಲೇಶ್ (46) ಬಟ್ಟೆಯ ಸಹಾಯದಿಂದ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿ ನೀಲೇಶ್ ನನ್ನು ಬಂಧಿಸಿದ್ದು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave A Reply