Home latest ಆರು ತಿಂಗಳ ಹಿಂದೆ ಬೀದಿ ನಾಯಿಗೆ ಹಲ್ಲೆ ನಡೆಸಿ ಅಟ್ಟಾಡಿಸಿ ಕೊಲ್ಲುವ ವಿಡಿಯೋ ವೈರಲ್ ಪ್ರಕರಣ|ಮೂವರ...

ಆರು ತಿಂಗಳ ಹಿಂದೆ ಬೀದಿ ನಾಯಿಗೆ ಹಲ್ಲೆ ನಡೆಸಿ ಅಟ್ಟಾಡಿಸಿ ಕೊಲ್ಲುವ ವಿಡಿಯೋ ವೈರಲ್ ಪ್ರಕರಣ|ಮೂವರ ವಿರುದ್ಧ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಮೈಸೂರು:ಮಾನವೀಯತೆಯೇ ಇಲ್ಲದೆ ಬೀದಿ ನಾಯಿಗಳಿಗೆ ಹಿಂಸೆ ನೀಡುತ್ತಿರುವುದನ್ನು ಅದೆಷ್ಟೋ ವಿಡಿಯೋಗಳಲ್ಲಿ ನೋಡುತ್ತಿದ್ದೇವೆ. ಅವುಗಳಿಗೂ ಜೀವವಿದೆ, ಮನುಷ್ಯರಂತೆಯೇ ಜೀವಿಗಳು ಎಂಬ ಕಿಂಚಿತ್ತೂ ಕರುಣೆ ಇಲ್ಲದೆ ಮೃಗಗಳಂತೆ ವರ್ತಿಸುತ್ತಾರೆ.ಅದೇ ರೀತಿ ಆರು ತಿಂಗಳ ಹಿಂದೆ ಬೀದಿ ನಾಯಿಯನ್ನು ಅಟ್ಟಾಟಿಸಿ ಕೊಂದ ವಿಡಿಯೋ ವೈರಲ್ ಆಗಿದ್ದು, ಇದೀಗ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜ ಮೊಹಲ್ಲಾ ಡಿ. ಸುಬ್ಬಯ್ಯ ರಸ್ತೆಯಲ್ಲಿ ಆರು ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.ವಿಡಿಯೋವನ್ನು ಬೆನ್ನತ್ತಿದ್ದ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ ಸದಸ್ಯರು, ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿ, ಘಟನೆಯ ಸ್ಥಳ ಮತ್ತು ನಡೆದ ದಿನವನ್ನು ಪತ್ತೆ ಹಚ್ಚಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿದಾಗ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿ ಸಿಕ್ಕಿದ್ದಾರೆ. ಅವರ ಮೂಲಕ ಸೂಕ್ತ ಸಾಕ್ಷ್ಯ ಸಂಗ್ರಹಿಸಿ, ನಾಯಿಯನ್ನು ಹಲ್ಲೆ ನಡೆಸಿ ಕೊಂದವರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಸಂಬಂಧ ಪೊಲೀಸರು, ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಮತ್ತು ಐಪಿಸಿ ಕಲಂ 429, ರೆಡ್ ವಿತ್ 34 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.