Home Interesting 9 ತಿಂಗಳ ಮಗುವಿನ ಪಾಲಿಗೆ ರಾಕ್ಷಸಿಯಾದ ತಾಯಿ |ಹಸುಗೂಸೆಂದೂ ನೋಡದೆ ಎತ್ತೆತ್ತಿ ಬಿಸಾಡುವ ಭಯಾನಕ ವೀಡಿಯೋ...

9 ತಿಂಗಳ ಮಗುವಿನ ಪಾಲಿಗೆ ರಾಕ್ಷಸಿಯಾದ ತಾಯಿ |ಹಸುಗೂಸೆಂದೂ ನೋಡದೆ ಎತ್ತೆತ್ತಿ ಬಿಸಾಡುವ ಭಯಾನಕ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ತಾಯಿ ಅಂದ್ರೇನೆ ಕರುಣಾಮಯಿ ಅನ್ನುತ್ತೇವೆ. ಅದೇ ರೀತಿ ತಾಯಿಯ ವರ್ತನೆಯು ಇರುತ್ತೆ. ಮಕ್ಕಳು ಅದೇನೇ ತಪ್ಪು ಮಾಡಿದರೂ ಹೊಟ್ಟೆಗೆ ಹಾಕಿಕೊಂಡು ಪ್ರೀತಿಯಿಂದ ಸಾಕುವವಳೇ ಅಮ್ಮಾ. ಆದ್ರೆ ಇಲ್ಲೊಂದು ಕಡೆ ಆ ತಾಯಿಯೇ ಕ್ರೂರಿಯಾಗಿದ್ದಾಳೆ.ಹೌದು. ಪ್ರಪಂಚದಲ್ಲಿ ಕೆಟ್ಟ ತಾಯಿಯೂ ಇದ್ದಾಳೆ ಎಂಬುದಕ್ಕೆ ಈಕೆಯೇ ಸಾಕ್ಷಿ.

ಈ ಮಹಾ ತಾಯಿ, ತನ್ನದೇ ಮಗುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಾಳೆ. ಒಂಭತ್ತು ತಿಂಗಳ ಪುಟ್ಟ ಕಂದಮ್ಮನಿಗೆ ತಾಯಿ ಮನಬಂದಂತೆ ಥಳಿಸಿರೋ ವಿಡಿಯೋ ವೈರಲ್‌ ಆಗಿದ್ದು,ಈ ಘಟನೆ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆದಿದೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೆಡ್‌ ಮೇಲೆ ಕುಳಿತು ಯಾರೊಂದಿಗೋ ಜಗಳ ಮಾಡ್ತಿದ್ದಾಳೆ. ಈ ವೇಳೆ ಪುಟ್ಟ ಮಗು ಒಂದೇ ಸಮನೆ ಅಳಲಾರಂಭಿಸಿದೆ. ಮಗು ಸುಮ್ಮನಾಗದೇ ಇದ್ದಾಗ ಸಿಟ್ಟಿಗೆದ್ದ ಮಹಿಳೆ, ಮಗುವಿಗೆ ಹೊಡೆದಿದ್ದಾಳೆ. ಬಲವಾಗಿ ಗುದ್ದಿ, ಹಾಸಿಗೆ ಮೇಲೆ ಎಸೆದಿದ್ದಾಳೆ.ಯಾರೊಬ್ಬ ಮನುಷ್ಯನಿಗೂ ಈ ವಿಡಿಯೋ ನೋಡಿದ ಬಳಿಕ ಕೋಪ ನೆತ್ತಿಗೇರುವುದರಲ್ಲಿ ಒಂದು ಮಾತಿಲ್ಲ.

ಅದೇ ರೀತಿ ಈ ವಿಡಿಯೋದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ಸಾಂಬಾ ಜಿಲ್ಲೆಯವಳು ಅನ್ನೋದು ಪತ್ತೆಯಾಗಿದೆ. ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ.‌ ಅಂದ ಹಾಗೆ ಈ ವಿಡಿಯೋ ಒಂದು ತಿಂಗಳ ಹಿಂದಿನದ್ದಾಗಿದ್ದು, ಈಗ ವೈರಲ್‌ ಆಗಿದೆ.

https://twitter.com/satwantrissam/status/1513544274020745220?s=20&t=ugmB0eZd4gQdnuOkmirhvg