ವಿದ್ಯುತ್ ತಗುಲಿ ಸಹೋದರರಿಬ್ಬರು ದಾರುಣ ಸಾವು !!

Share the Article

ವಿದ್ಯುತ್ ತಗುಲಿ ಸಹೋದರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದಿದೆ.

ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ ಮೃತ ಸಹೋದರರು.

ಅಣ್ಣ ಮುದ್ದುಗೌಡ ಮೋಟಾರ್ ಆನ್ ಮಾಡಲು ಹೋದಾಗ ಕರೆಂಟ್ ತಗುಲಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋದ ತಮ್ಮ ಶಿವರಾಜ್‍ಗೂ ವಿದ್ಯುತ್ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಈ ಘಟನೆ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave A Reply