ಒಂದೇ ರಿಚಾರ್ಜ್ ನಲ್ಲಿ 3 ಸಿಮ್ ಚಲಾವಣೆ ಜೊತೆಗೆ 150 GB ವರೆಗೆ ಡೇಟಾ ಪ್ಯಾಕ್ ಕೂಡ ಪಡೆದುಕೊಳ್ಳಿ !! | ಈ ಚೀಪೆಸ್ಟ್ ಪೋಸ್ಟ್ ಪೇಯ್ಡ್ ಯೋಜನೆಯ ಬಗ್ಗೆ ಕುರಿತು ಇಲ್ಲಿದೆ ಮಾಹಿತಿ

Share the Article

ಎಲ್ಲಾ ಬೆಲೆಯೇರಿಕೆಗಳ ನಡುವೆ ಮೊಬೈಲ್ ರೀಚಾರ್ಜ್ ದರವು ಗ್ರಾಹಕರ ತಲೆ ಕೆಡಿಸಿದೆ. ಮೊಬೈಲ್ ರಿಚಾರ್ಜ್ ದರ ಏರಿಕೆಯಿಂದ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಹಲವಾರು ಮಂದಿ ಪೋಸ್ಟ್ ಪೇಯ್ಡ್ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪೋಸ್ಟ್ ಪೇಯ್ಡ್ ಯೋಜನೆಗಳು ನಿಮಗೂ ಹಾಗೂ ನಿಮ್ಮ ಕುಟುಂಬ ಸದಸ್ಯರಿಗೂ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತದೆ.

ಹೌದು. ಜಿಯೋ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ಇಂತಹ ಹಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳು ನಿಮಗೆ ಸರಾಸರಿ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ ಕೈಗೆಟುಕುವ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Jio ಕಂಪನಿಯ ರೂ.799ರ ಯೋಜನೆ

ಜಿಯೋ ಕಂಪನಿಯ ₹ 799 ರ ತಿಂಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ, ನಿಮಗೆ ಒಂದು ಪ್ರಾಥಮಿಕ ಸಿಮ್ ಜೊತೆಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಕುಟುಂಬ ಸದಸ್ಯರಿಗಾಗಿಯೇ ನೀಡಲಾಗುತ್ತದೆ. ಇದರಲ್ಲಿ ನೀವು ಒಟ್ಟು 150 GB ಡೇಟಾಸೌಲಭ್ಯ ಪಡೆಯುವಿರಿ. ಆದರೆ ಇದರಲ್ಲಿ ನೀವು 200 GB ವರೆಗೆ ಡೇಟಾವನ್ನು ರೋಲ್‌ಓವರ್ ಮಾಡಬಹುದು. ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಅನ್ನು ಸಹ ಒಳಗೊಂಡಿದೆ.

ಪೋಸ್ಟ್‌ಪೇಯ್ಡ್ ಯೋಜನೆಗಳ ವಿಶೇಷತೆಯೆಂದರೆ ಅವುಗಳು ಅನೇಕ OTT ಪ್ಲಾಟ್‌ಫಾರ್ಮ್‌ಗಳ ಸದಸ್ಯತ್ವವನ್ನು ನೀಡುತ್ತವೆ. ಜಿಯೋದ ಯೋಜನೆಯಲ್ಲಿ, ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜೊತೆಗೆ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಿಗುತ್ತದೆ.

Leave A Reply