ಸಂತೋಷ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ- ಕೆ.ಎಸ್.ಈಶ್ವರಪ್ಪ | ಅವರೇ ತಪ್ಪು ಮಾಡಿದ್ದು ನಾನಲ್ಲ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

“ಅವರೇ ತಪ್ಪು ಮಾಡಿದ್ದು, ನಾನು ಯಾವುದೇ ತಪ್ಪನ್ನು ಮಾಡಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪನವರು, “ದೆಹಲಿಯಲ್ಲಿ ಡಿ.ಕೆ ಸುರೇಶ್, ಹನುಮಂತಯ್ಯ ಅವರನ್ನು ಸಂತೋಷ್ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಕಾಪಿಯನ್ನು ನಾನು ತೆಗೆದುಕೊಂಡು ಗುತ್ತಿಗೆದಾರ ಸಂತೋಷ್ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಕೇಸ್ ಹಾಕಿದ್ದೇನೆ” ಎಂದು ಹೇಳಿದರು.

“ಕೋರ್ಟ್‍ನಿಂದ ನೋಟಿಸ್ ಹೋದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಟಿಸ್ ಹೋದ ನಂತರ ಗಾಬರಿಯಾಗಿದ್ದಾರೆ ಅನಿಸುತ್ತೆ. ಸಂತೋಷ್ ಆತ್ಮಹತ್ಯೆಗೂ, ನನಗೂ ಏನೂ ಸಂಬಂಧವಿಲ್ಲ. ಸಂತೋಷ್ ಅವರನ್ನು ನಾನು ನೋಡಿಲ್ಲ. ಅವರು ಯಾರೂ ಎಂದು ನನಗೆ ಗೊತ್ತಿಲ್ಲ” ಎಂದು ಈಶ್ವರಪ್ಪನವರು ಇಂದು ಸ್ಪಷ್ಟಪಡಿಸಿದರು.

“40 ಪರ್ಸೆಂಟ್ ಕಮಿಷನ್ ಕುರಿತು ಗುತ್ತಿಗೆದಾರ ಸಂತೋಷ್ ನನ್ನ ಬಗ್ಗೆಯೂ ಅಲ್ಲ, ನಮ್ಮ ಕಡೆ ಅವರು ಯಾರೋ ಕೇಳುತ್ತಿದ್ದಾರೆ ಎಂದು ಪತ್ರ ಬರೆದಿದ್ದಾರೆ. ಇದರಿಂದಾಗಿ ನಾನು ಕಾನೂನುಬದ್ಧವಾಗಿ ಪ್ರಜಾಪ್ರಭುತ್ವದಲ್ಲಿ ಏನು ವ್ಯವಸ್ಥೆ ಇದೆಯೋ ಅದನ್ನು ನಾನು ಮಾಡಿದ್ದೇನೆ. ಸುಮ್‍ಸುಮ್ಮನೆ ಯಾವುದೇ ರಾಜಕಾರಣಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಪತ್ರಗಳನ್ನು ಬರೆದರೆ ಸಹಿಸಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಕೋರ್ಟ್‍ಗೆ ಹೋಗಿದ್ದೇನೆ” ಎಂದು ಹೇಳಿದ್ದಾರೆ.

Leave A Reply

Your email address will not be published.