ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ರೈಲಿಗೆ ಸಿಲುಕಿ ಮೃತಪಟ್ಟ ರೌಡಿ ಶೀಟರ್!

Share the Article

ರಾಮನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಸಾವು ಕಂಡಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ.

ಸಾವನ್ನಪ್ಪಿದ ರೌಡಿಶೀಟರ್ ಮಾದನಾಯಕನಹಳ್ಳಿಯ ದಿಲೀಪ್ ಎಂದು ಗುರುತಿಸಲಾಗಿದೆ.

ದಿಲೀಪ್ ಬಸವನಪುರ ಬಳಿ ನಿನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ, ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು.ಈ ವೇಳೆ ಡ್ರಿಂಕ್ಸ್ ಮಾಡಿದ್ದ ಈತ ಭಯದಿಂದ ತಪ್ಪಿಸಿಕೊಳ್ಳಲೆಂದು ಕಾರಿನಿಂದ ಇಳಿದು ಹೋಗಿ ರೈಲ್ವೇ ಹಳಿ ಕ್ರಾಸ್ ಮಾಡುವ ಅವಸರದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮೃತ ದಿಲೀಪ್ ಮತ್ತು ಕಾರಿನಲ್ಲಿದ್ದ ಕೆಟಿಎಂ ಭರತ, ರವಿ ಸೇರಿದಂತೆ ಇತರರು ಪ್ರಕರಣದ ಹಿನ್ನೆಲೆ ರಾಮನಗರ ಜೈಲಿಗೆ ತೆರಳಿ ಸಹಿ ಮಾಡಿ ವಾಪಸ್ಸು ಬರುವ ಸಮಯದಲ್ಲಿ ಎಣ್ಣೆ ಪಾರ್ಟಿ ನಡೆಸಿ ಮೈಸೂರು ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ.

Leave A Reply