Home News ಪಕ್ಕದಲ್ಲೇ ಕೂತು ತನ್ನ ಖತರ್ನಾಕ್ ಐಡಿಯಾದಿಂದ ಮದುಮಗನಿಗೇ ಪಂಗನಾಮ ಹಾಕಿದ ಸ್ನೇಹಿತ!! | ಸ್ನೇಹ ಎಂಬ...


ಪಕ್ಕದಲ್ಲೇ ಕೂತು ತನ್ನ ಖತರ್ನಾಕ್ ಐಡಿಯಾದಿಂದ ಮದುಮಗನಿಗೇ ಪಂಗನಾಮ ಹಾಕಿದ ಸ್ನೇಹಿತ!! | ಸ್ನೇಹ ಎಂಬ ಪದಕ್ಕೆ ಮಸಿಬಳಿಯುವಂತಹ ಈತನ ಈ ಕೃತ್ಯದ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಕಳ್ಳತನ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪ್ರತಿ ಕಳ್ಳತನಕ್ಕೂ ಕಳ್ಳರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಕಳ್ಳತನಕ್ಕೆ ಸಂಬಂಧಿಸಿದ ವಿವಿಧ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪೋಸ್ಟ್ ಆಗುತ್ತಿರುತ್ತವೆ. ಕೆಲವೊಮ್ಮೆ ಕಳ್ಳರು ಪಿಕ್ ಪಾಕೆಟ್ ಮಾಡಿದರೆ ಇನ್ನು ಕೆಲವೊಮ್ಮೆ, ಎದುರಿಗಿದ್ದ ದುಬಾರಿ ವಸ್ತುಗಳನ್ನೇ ಎಗರಿಸಿ ಬಿಡುತ್ತಾರೆ. 

ಆದರೆ ತನ್ನವರು ಎಂದು ಎನಿಸಿಕೊಂಡವರೇ ಕಳ್ಳತನ ಮಾಡಿದರೆ ಹೇಗಿರಬೇಡ…ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ವೀಡಿಯೋವೊಂದು ಹರಿದಾಡುತ್ತಿದೆ. ಮದುವೆ ಸಮಾರಂಭದಲ್ಲಿ ಸ್ನೇಹಿತನೇ ವರನ ಹಣವನ್ನು ಬಹಳ ನಾಜೂಕಾಗಿ ಕದಿಯುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.

ಈ ವೀಡಿಯೋದಲ್ಲಿ ವರನನ್ನು ಕಾಣಬಹುದು. ಆ ವರನ ಸುತ್ತ ಮುತ್ತ ಸ್ನೇಹಿತರು ಮತ್ತು ಸಂಬಂಧಿಕರು ಕುಳಿತಿರುತ್ತಾರೆ. ವರನ ಕೊರಳಲ್ಲಿ ಹಣದ ಮಾಲೆಯೂ ಇದ್ದು, ವರನ ಪಕ್ಕದಲ್ಲಿ ಕುಳಿತ ಸ್ನೇಹಿತ ಪದೇ ಪದೇ ವರನ ಬಳಿಯಿರುವ ಹಣ ಕಡಿಯಲು ಪ್ರಯತ್ನಿಸುತ್ತಿರುತ್ತಾನೆ. ಕೊನೆಗೂ ಹಣ ಕದಿಯುವಲ್ಲಿ ಯಶಸ್ವಿಯಾಗುತ್ತಾನೆ. ಸ್ನೇಹಿತ ಎಂದು ಪಕ್ಕದಲ್ಲಿ ಕುಳಿತುಕೊಂಡು ಬಹಳ ಚೆನ್ನಾಗಿಯೇ ಕನ್ನ ಹಾಕಿದ್ದಾನೆ.

ಈ ಕಳ್ಳತನದ ವೀಡಿಯೊವನ್ನು meemlogyandghantaa ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಈ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಮಾತ್ರವಲ್ಲ ಅನೇಕ ಮಂದಿ ವಿವಿಧ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ.