ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್!
ಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ.
ಇದೀಗ ಇಲ್ಲಿನ ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್ ಅವರಲ್ಲೂ ಸಹ ಇದೀಗ ಈ ಮಹಾಮಾರಿ ವೈರಸ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ವೈದ್ಯರ ಸೂಚನೆಯಂತೆ ಕೋವಿಡ್ 19 ತಪಾಸಣೆಗೆ ಒಳಗಾದ ಮ್ಯಾಟ್ ಅವರಲ್ಲಿ ಈ ಸೋಂಕಿನ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿದೆ ಆದರೆ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳಿರುವುದರಿಂದ ಅವರು ಇದೀಗ ಮನೆಯಲ್ಲೇ ಐಸೊಲೇಷನ್ ನಲ್ಲಿದ್ದಾರೆ ಮತ್ತು ಅಲ್ಲಿಂದಲೇ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ನಲ್ಲಿ 11,658 ಕೋವಿಡ್ 19 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ರಾಷ್ಟ್ರದಲ್ಲಿ ಇದುವರೆಗೆ 578 ಜನ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ವಿಶೇಷವೆಂದರೆ ನಿನ್ನೆ ಇಂಗ್ಲಂಡ್ ನಲ್ಲಿ ಯಾವುದೇ ಹೊಸ ಕೋವಿಡ್ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು 135 ಜನರು ಈ ಸೋಂಕಿನಿಂದ ಇದುವರೆಗೆ ಚೇತರಿಸಿಕೊಂಡಿದ್ದಾರೆ.