ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ!

Share the Article

ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರ್ಥಿಕ ದಿವಾಳಿಯಿಂದ ಬೇಸತ್ತ ಶ್ರೀಲಂಕಾದ ಸಚಿವರುಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದು ಈ ಕುರಿತ ಸಾಮಾನ್ಯ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಹೊರತುಪಡಿಸಿ ಸಂಪುಟದ ಎಲ್ಲಾ ಸಚಿವರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಮಹಿಂದ ರಾಜಪಕ್ಸೆ ಅವರ ಹಿರಿ ಮಗ ನಮಲ್ ರಾಜಪಕ್ಸೆ ಕೂಡ ಇದ್ದಾರೆ.

2019ರಲ್ಲಿ ಬಹುಮತದೊಂದಿಗೆ ಮಹಿಂದ ರಾಜಪಕ್ಸೆ ಅಧಿಕಾರಕ್ಕೆ ಬಂದಿದ್ದರು. ಆದರೆ ಅವರ ಆಡಳಿತದಲ್ಲಿ ದೇಶ ಆರ್ಥಿಕ ದುಸ್ಥಿತಿ ತಲುಪಿದೆ. ಸದ್ಯಕ್ಕೆ ಶ್ರೀಲಂಕಾದಲ್ಲಿ ಅರಾಜಕತೆ ತಲೆದೋರಿದೆ. ಈಗಾಗಲೇ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ

Leave A Reply