14 ವರ್ಷದಿಂದ ಏರ್ಪೋರ್ಟ್ ನ್ನೇ ಮನೆಮಾಡಿಕೊಂಡಿರುವ ವ್ಯಕ್ತಿ ; ಅದು ಹೇಗೆ ? ಕಾರಣ ಕೇಳಿದ ಜನ ಶಾಕ್ !
ವಿಮಾನ ಹತ್ತುವ 1 ಅಥವಾ 3 ತಾಸಿನ ಒಳಗೆ ಕಡ್ಡಾಯವಾಗಿ ಹೋಗಬೇಕು. ವಿಮಾನ ನಿಲ್ದಾಣಕ್ಕೆ ಒಳಗೆ ಹೋಗಲು ಟೀಕೇಟ್ ಮತ್ತು ಅನೇಕ ದಾಖಲೆಗಳು ವಿದೇಶಿ ವಿಮಾನವಾದರೆ ವಿಸಾ ಪಾಸ್‌ಪೋರ್ಟ್ ಕಡ್ಡಾಯ ಮತ್ತು ಹಲವು ಬಾರಿ ಚೆಕ್ಕಿಂಗ್ ಇರುತ್ತದೆ. ನಮ್ಮನ್ನು ಗಮನಿಸಲೆಂದೇ ಹಲವರು ಇರುತ್ತಾರೆ. ಸುಮ್ಮ ಸುಮ್ಮನೆ ನಾವಲ್ಲಿ ಇರಲು ಸಾಧ್ಯವಿಲ್ಲ. ಅದರೆ ವಿಮಾನ ನಿಲ್ದಾಣವೇ ಒಂದು ಬೇರೆ ಪ್ರಪಂಚ ಅಲ್ಲಿ ಎಲ್ಲವೂ ದೊರೆಯುತ್ತದೆ. ಬಸ್ ನಿಲ್ದಾಣದಲ್ಲಿ ಜನ ಎಲ್ಲಿ ಬೇಕಾದರೂ ಕೂರಬಹುದು ಯಾರು ಎಲ್ಲಿಬೇಕಾದರೂ ಮಲಗಬಹುದು. ಅದು ನಿರಾಶ್ರಿತರ ತಾಣ. ಆದರೆ ವಿಮಾನ ನಿಲ್ದಾಣದಲ್ಲಿ ಹಾಗಾಗಲೂ ಸಾಧ್ಯವೇ ಇಲ್ಲ. ಆದರೆ ಇಲ್ಲೊಂದೆಡೆ ಒಬ್ಬ ವಿಮಾನ ನಿಲ್ದಾಣದಲ್ಲಿ 14 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ . ಅದು ಹೇಗೆ ಇಲ್ಲಿದೆ ನೋಡಿ
ಚೀನಾದ ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ವರ್ಷಗಳಿಂದ ವಾಸ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ ಈಗ ಮನೆಗೆ ಹೋಗಲು ಮನಸ್ಸೇ ಇಲ್ಲ ಎನ್ನುತ್ತಾನೆ! ಜಿಯಾಂಗುವೊ ಎಂಬ ವ್ಯಕ್ತಿ 2008ರಲ್ಲಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ವಾಸ ಆರಂಭಿಸಿದ್ದರು. ಇಲ್ಲಿಯವರೆಗೆ ಭದ್ರತಾ ಸಿಬ್ಬಂದಿಯಾಗಲೀ, ಸ್ವಚ್ಛತಾ ಸಿಬ್ಬಂದಿಯಾಗಲೀ ಒಂದು ಬಾರಿ ಬಿಟ್ಟು ಮತ್ತೆ ಅವರನ್ನು ಹೊರಗೆ ಹಾಕಿಲ್ಲ.
ಅವರ ಮನೆ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿದೆ. ಆದರೆ ಅವರ ಮನೆಯ ಜನ ಕುಡಿಯಬಾರದು, ಸಿಗರೇಟು ಸೇದಬಾರದು, ಹಾಗಿದ್ದರೆ ಮಾತ್ರ ಜೊತೆಯಲ್ಲಿರಬೇಕು. ಇಲ್ಲವೇ ಸರ್ಕಾರ ತಿಂಗಳಿಗೆ ನೀಡುವ ಅಷ್ಟೂ ಆರ್ಥಿಕ ನೆರವನ್ನು ಮನೆಗೇ ನೀಡಬೇಕು ಎಂದು ಕುಟುಂಬಸ್ಥರು ಇವರಿಗೆ ಹೇಳಿದ್ದರಂತೆ. ಕುಡಿಯುವುದಕ್ಕೆ ಅವಕಾಶವಿಲ್ಲದಿದ್ದ ಮೇಲೆ ಮನೆಯಲ್ಲಿದ್ದು ಏನು ಮಾಡಬೇಕೆಂದು ವಿಮಾನ ನಿಲ್ದಾಣದಲ್ಲೇ ಇವರು ವಾಸವಾಗಿದ್ದಾರೆ.ಇವರಂತೆಯೇ ಇನ್ನೂ ಐದಾರು ಮಂದಿ ಅಲ್ಲೇ ಇದ್ದಾರಂತೆ! ಬೈರಾಮ್ ಟೆಪೆಲಿ ಎಂಬವರೂ 1991 ರಲ್ಲಿ ಅಟಾತುರ್ಕ್ ವಿಮಾನ ನಿಲ್ದಾಣಕ್ಕೆ ತೆರಳಿ 27 ವರ್ಷಗಳ ಕಾಲ ಅಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ.
ನನಗೆ ಕುಟುಂಬದಲ್ಲಿ ಸ್ವಾತಂತ್ರ‍್ಯವಿಲ್ಲ. ಹಾಗಾಗಿ ನಾನು ಮನೆಗೆ ಹಿಂದಿರುಗಲು ಸಾಧ್ಯವಿಲ್ಲ. ನಾನು ಉಳಿಯಲು ಬಯಸಿದರೆ, ಧೂಮಪಾನ ಮತ್ತು ಮದ್ಯ ಸೇವನೆ ಬಿಡಬೇಕು. ಇಲ್ಲವೇ ಮನೆಯವರಿಗೆ ಒಂದು ತಿಂಗಳ ವೇತನ 1,000 ಯೂರೋವನ್ನು (200 ಡಾಲರ್ ಅಥವಾ 11,923.51 ರೂ.) ನೀಡಬೇಕಾಗಿತ್ತು. ಈ ಹಣವನ್ನು ಅವರಿಗೇ ನೀಡಿದ್ದರೆ ನಾನು ಮದ್ಯ ಮತ್ತು ಸಿಗರೇಟ್ ಅನ್ನು ಹೇಗೆ ಖರೀದಿಸಲಿ. ಅದಕ್ಕಾಗಿ ನಾನು ಮನೆ ತೊರೆಯುವ ಪ್ರಯತ್ನ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಪೊಲೀಸರು ಅವರಿಗೆ ಭದ್ರತೆ ನೀಡಿದ್ದಾರೆ. ಜೊತೆಗೆ ವಾಂಗ್‌ಜಿಂಗ್‌ನಲ್ಲಿರುವ ತಮ್ಮ ಮನೆಗೆ ಆಗಾಗ ಕರೆದೊಯ್ಯುತ್ತಿದ್ದಾರೆ.