Home News ಆಧಾರ್- ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಕೊನೆಯ ದಿನ !! | ಲಿಂಕ್ ಪ್ರಕ್ರಿಯೆ...

ಆಧಾರ್- ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಕೊನೆಯ ದಿನ !! | ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ತೆರಬೇಕಾದೀತು ಭಾರೀ ದಂಡ

Hindu neighbor gifts plot of land

Hindu neighbour gifts land to Muslim journalist

ಆಧಾರ್ ಕಾರ್ಡ್ ಭಾರತೀಯ ದಾಖಲೆಗಳಲ್ಲಿ ಅತೀ ಮುಖ್ಯವಾದದ್ದು. ಎಲ್ಲಾ ಕೆಲಸಗಳಿಗೂ ಆಧಾರ್ ಇದೀಗ ಕಡ್ಡಾಯವಾಗಿದೆ. ಹೀಗಿರುವಾಗ ಆಧಾರ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ. ನೀವು ಇನ್ನೂ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದಾದರೆ, ನಾಳೆಯೊಳಗೆ ಈ ಕೆಲಸವನ್ನು ಮುಗಿಸಿಕೊಳ್ಳಿ. ಇಲ್ಲವಾದರೆ ಭಾರೀ ದಂಡವನ್ನು ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಬಿಡಿಟಿ ಅಧಿಸೂಚನೆಯನ್ನು ಹೊರಡಿಸಿದೆ.

ಆಧಾರ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಅಂದರೆ ನಾಳೆ. ಆದರೆ ಇದರ ನಂತರವೂ ದಂಡ ಪಾವತಿಸುವ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಮಾರ್ಚ್ 31 ರ ನಂತರವೂ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬಹುದು ಎಂದು CBDT ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ನಾಳೆಯ ನಂತರ ದಂಡವನ್ನು ಪಾವತಿಸಬೇಕಾಗುತ್ತದೆ.

ಅಧಿಸೂಚನೆಯ ಪ್ರಕಾರ, ಮಾರ್ಚ್ 31 ರ ನಂತರ 3 ತಿಂಗಳೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿದರೆ, 500 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. 3 ತಿಂಗಳವರೆಗೆ ಅಂದರೆ ಜೂನ್ ವರೆಗೆ ಲಿಂಕ್ ಮಾಡದಿದ್ದರೆ, ನಂತರ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಪಾನ್ ಮತ್ತು ಆಧಾರ್ ಅನ್ನು ಈ ರೀತಿ ಲಿಂಕ್ ಮಾಡಿ :

*ಪಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
*ಸೈಟ್‌ನ ಎಡಭಾಗದಲ್ಲಿ, ನೀವು ಕ್ವಿಕ್ ಲಿಂಕ್‌ಗಳ ಆಯ್ಕೆ ಕಾಣಿಸುತ್ತದೆ. ಇಲ್ಲಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
*ಇಲ್ಲಿ ನೀವು ನಿಮ್ಮ ಪಾನ್, ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು.
*ಮಾಹಿತಿ ನೀಡಿದ ನಂತರ, ನಿಮಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ, ನಿಮ್ಮ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡಲಾಗುತ್ತದೆ.