Home Health ಇವತ್ತು ವಿಶ್ವ ಇಡ್ಲಿ ದಿನ; ತಿಳಿಯಿರಿ ಈ ದಿನದ ಕುತೂಹಲ ಮಾಹಿತಿ

ಇವತ್ತು ವಿಶ್ವ ಇಡ್ಲಿ ದಿನ; ತಿಳಿಯಿರಿ ಈ ದಿನದ ಕುತೂಹಲ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಯಾವುದೇ ಕಾರ್ಯಕ್ರಮ ಆಗಿರಬಹುದು,ಹಬ್ಬವೇ ಆಗಿರಬಹುದು, ಬೆಳಗ್ಗಿನ ದಿನನಿತ್ಯದ ಉಪಹಾರವೇ ಆಗಿರಬಹುದು ಆಗೆಲ್ಲಾ ಇಡ್ಲಿ ಗೆ ಪ್ರಾಶಸ್ತ್ಯ ಸ್ಥಾನ.‌ ದಕ್ಷಿಣ ಭಾರತದ ಹೊಟೇಲುಗಳಲ್ಲಿ ಇಡ್ಲಿ ಇಲ್ಲದೆ ಇರಲಾರದು. ಹೀಗೆ ಬಹುಜನಪ್ರಿಯ ಇಡ್ಲಿ ಈಗ ಕೇವಲ ದಕ್ಷಿಣ ಭಾರತದ ತಿಂಡಿ ಎಂದರೆ ತಪ್ಪು. ಇದೀಗ ದೇಶಾದ್ಯಂತ ಅಷ್ಟೇ ಏಕೆ ಹೊರದೇಶಗಳಲ್ಲಿ ಕೂಡ ಜನಪ್ರಿಯವಾಗಿದೆ. ಹಾಗಾಗಿ ಇಡ್ಲಿಗೂ ಒಂದು ದಿನವಿದೆ.

ಇಡ್ಲಿ ಭಾರತದ ಮೂಲದ್ದು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದಲ್ಲಿ ಎಂದು ಚರಿತ್ರಾ ಪುಟಗಳು ಹೇಳುತ್ತವೆ. ವಿಶ್ವ ಇಡ್ಲಿ ದಿನವನ್ನು ಮೊದಲಿಗೆ ಆರಂಭಿಸಿದ್ದು ಚೆನ್ನೈನ ಇನಿಯವಣ್‌ ಎಂಬವರು. 2015 ರಿಂದ ಪ್ರತಿ ವರ್ಷ, ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತದೆ. ಚೆನ್ನೈ ಮೂಲದ ಎನಿಯವನ್ ಎಂಬ ಇಡ್ಲಿ ಅಡುಗೆಮಾಡುವವರು ಈ ತಿನಿಸಿಗೂ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಿದರು!

ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವಣ್ ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇಡ್ಲಿ ತಯಾರಿಸುವ ಮಹಿಳೆಯೊಬ್ಬರ ಪರಿಚಯವಾಗಿ, ನಂತರ ಅವರ ಪ್ರೇರಣೆಯಿಂದ  ಇಡ್ಲಿ ತಯಾರಿಸಲು ಆರಂಭಿಸಿದರಂತೆ. ಹೀಗೆ ಪ್ರಯೋಗಗಳನ್ನು ನಡೆಸುತ್ತಾ 2000 ವಿಧದ ಇಡ್ಲಿಗಳನ್ನು ತಯಾರಿಸಿ ಇನಿಯವಣ್ ದಾಖಲೆ ಸೃಷ್ಟಿಸಿದ್ದರು. ಈತನ ಈ ಪ್ರಯೋಗಗಳನ್ನು ಗೌರವಿಸಿ ಅಮೆರಿಕದ ವಿವಿಯೊಂದು ಇವರಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿತ್ತು. ಅವರೊಂದಿಗೆ ಕೈ ಜೋಡಿಸಿದ ತಮಿಳುನಾಡು ಕ್ಯಾಟರಿಂಗ್‌ ಎಂಪ್ಲಾಯ್ಸ್‌ ಯೂನಿಯನ್‌ನ ಅಧ್ಯಕ್ಷ ರಾಜಾಮಣಿ ಅಯ್ಯರ್‌ ಅವರು ಮಾರ್ಚ್‌ 30 ರಂದು ಈ ದಿನ ಆಚರಿಸಲು ನಿರ್ಧರಿಸಿದರು. ಅಂದಿನಿಂದ ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ದಿನ ಇನಿಯವಣ್ ಅವರ ಜನ್ಮದಿನವೂ ಹೌದು.