Home ದಕ್ಷಿಣ ಕನ್ನಡ 94ಸಿ ಅಡಿಯಲ್ಲಿ ಅನಧಿಕೃತ ಮನೆಯನ್ನು ಸಕ್ರಮಗೊಳಿಸಲು ಮಾ.31ರವರೆಗೆ ಅವಕಾಶ

94ಸಿ ಅಡಿಯಲ್ಲಿ ಅನಧಿಕೃತ ಮನೆಯನ್ನು ಸಕ್ರಮಗೊಳಿಸಲು ಮಾ.31ರವರೆಗೆ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅವಕಾಶ ಮಾ.31ರಂದು ಕೊನೆಗೊಳ್ಳಲಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಅರ್ಜಿಗಳನ್ನ ಸ್ವೀಕರಿಸಲು 2019ರ ಮಾ.31ರವರೆಗೆ ಕಾಲಾವಕಾಶ ನಿಗದಿಪಡಿಲಾಗಿತ್ತು. ಬಳಿಕ 2022ರ ಮಾ.31ರ ಕಾಲಾವಕಾಶ ನೀಡಲಾಗಿತ್ತು.

ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ 2023ರ ಮಾ.31ರ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಹೇಳಲಾಗಿದೆ.