Home News ಮುಸ್ಲಿಂ ಭರತ ನಾಟ್ಯ ಕಲಾವಿದೆಯ ಕಾರ್ಯಕ್ರಮ ರದ್ದು ಮಾಡಿದ ಕೇರಳದ ಪ್ರಸಿದ್ಧ ದೇವಾಲಯ | ಹಿಂದೂವನ್ನು...

ಮುಸ್ಲಿಂ ಭರತ ನಾಟ್ಯ ಕಲಾವಿದೆಯ ಕಾರ್ಯಕ್ರಮ ರದ್ದು ಮಾಡಿದ ಕೇರಳದ ಪ್ರಸಿದ್ಧ ದೇವಾಲಯ | ಹಿಂದೂವನ್ನು ಮದುವೆಯಾದರೂ ಸಿಗದ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಕೇರಳ : ದೇವಸ್ಥಾನದಲ್ಲಿ ಹಿಂದೂಯೇತರ ಕಲಾವಿದೆಯ ಭರತನಾಟ್ಯ ಕಾರ್ಯಕ್ರಮವನ್ನೇ ರದ್ದು ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ತ್ರಿಶೂರ್‌ ಜಿಲ್ಲೆಯ ಇರಿಂಜಲಕುಡದಲ್ಲಿರುವ ಕೂಡಲಮಾಣಿಕ್ಯಂ ದೇಗುಲದಲ್ಲಿ ಏಪ್ರಿಲ್‌ನಲ್ಲಿ 10 ದಿನಗಳ ಉತ್ಸವ ನಡೆಯಲಿದೆ. ಕೇರಳ ಸರ್ಕಾರದ ಅಧೀನದಲ್ಲಿರಿವ ದೇವಸ್ವಂ ಬೋರ್ಡ್ ವ್ಯಾಪ್ತಿಯಲ್ಲಿ ಬರುವ ಕೂಡಲ ಮಾಣಿಕ್ಯಂ ದೇಗುಲದ ಉತ್ಸವದಲ್ಲಿ ಸುಮಾರು 800 ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ಅದರಲ್ಲಿ ಮುಸ್ಲಿಂ ಧರ್ಮದ ಪ್ರಸಿದ್ಧ ಭರತನಾಟ್ಯ ಕಲಾವಿದೆ ಮನ್ಸಿಯಾ ವಿ.ಪಿ ಕೂಡ ಆಯ್ಕೆಯಾಗಿದ್ದರು. ಆದರೆ ಅವರು ಹಿಂದೂ ಧರ್ಮದವರಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನ ಮಂಡಳಿ ಅವರ ಕಾರ್ಯಕ್ರಮವನ್ನು ರದ್ದು ಮಾಡಿದೆ ಎನ್ನಲಾಗಿದೆ.

ಈ ವಿಚಾರವನ್ನು ಮನ್ಸಿಯಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇಲ್ಲಿ ಕಲೆಗಿಂತ ಧರ್ಮವೇ ಮುಖ್ಯ. ಇದೇನೂ ನನಗೆ ಮೊದಲಲ್ಲ. ಈ ಹಿಂದೆ ಗುರುವಾಯೂರು ದೇಗುಲದಲ್ಲೂ ಇದೇ ಕಾರಣ ಕೊಟ್ಟು ಕಾರ್ಯಕ್ರಮ ರದ್ದು ಮಾಡಿದ್ದರು. ನಾನು ಹಿಂದೂವನ್ನು ಮದುವೆಯಾದ ಮೇಲೆ ಧರ್ಮ ಬದಲಾವಣೆ ಮಾಡಿಕೊಂಡಿಲ್ಲವೆಂದೂ ಅನೇಕರು ಪ್ರಶ್ನಿಸುತ್ತಾರೆ. ಆದರೆ ನನಗೆ ಯಾವುದೇ ಧರ್ಮವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ದೇವಸ್ಥಾನದ ಕಾರ್ಯಕ್ರಮಕ್ಕೆ ಭಾಗವಹಿಸಲು ನೀಡಿದ್ದ ಅರ್ಜಿಯಲ್ಲಿ ಮನ್ಸಿಯಾ ಅವರು “ನಾನು ಯಾವುದೇ ಧರ್ಮಕ್ಕೆ ಸೇರಿದವಳಲ್ಲ’ ಎಂದು ಬರೆದುಕೊಟ್ಟಿದ್ದರು ಎಂದು ಮಂಡಳಿ ತಿಳಿಸಿದೆ. ಹಿಂದೂ ಧರ್ಮದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡುವುದು ವ್ಯವಸ್ಥಾಪನಾ ಮಂಡಳಿಯ ನಿಯಮ ಎನ್ನಲಾಗಿದೆ.