ಮೆದುಳಿನ ರಕ್ತಸ್ರಾವ : ಬೆಳ್ತಂಗಡಿಯ ಗ್ರಾಮಕರಣಿಕ ನಿಧನ

Share the Article

ಬೆಳ್ತಂಗಡಿ : ಮೆದುಳಿನ ರಕ್ತಸ್ರಾವದಿಂದ ಬೆಳ್ತಂಗಡಿ ನಿವಾಸಿ, ಗ್ರಾಮಕರಣಿಕ ರೂಪೇಶ್(38) ಮಾ.27 ರಂದು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ್ದ ರೂಪೇಶ್ ಅವರು ಕೊಕ್ಕಡಕ್ಕೆ ವರ್ಗಾವಣೆಗೊಂಡು ಪ್ರಸ್ತುತ ಕೊಕ್ಕಡ, ಶಿಶಿಲ, ಶಿಬಾಜೆಯ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬೆಳ್ತಂಗಡಿಯಲ್ಲಿ ವಾಸ್ತವ್ಯವಿದ್ದು, ಮಾ.18 ರಂದು ರಾತ್ರಿ ವೇಳೆ ಅಸ್ವಸ್ಥಗೊಂಡ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ

Leave A Reply