ಈ ಬಾರಿ ಕಪ್ ಆರ್ಸಿಬಿ ಪಾಲಿಗೆ ? ಇಂದಿನ ಪಂದ್ಯದ ಕುರಿತಾದ ಸಮಸ್ತ ಮಾಹಿತಿ ಇಲ್ಲಿದೆ

Share the Article

ಹೊಸ ನಾಯಕನೊಂದಿಗೆ ಐಪಿಎಲ್ ಗೆ ಸಜ್ಜಾದ ಆರ್ಸಿಬಿ ಇಂದು ಈ ಬಾರಿಯ ಐಪಿಎಲ್ ನಲ್ಲಿ‌ ಇಂದು ಮೊದಲ ಆಟಕ್ಕೆ ಅಣಿಯಾಗಿದೆ. ಈ ಬಾರಿಯೂ ಕಪ್ ನಮ್ಮದೆ ಎನ್ನುವ ಕೂಗು ಹೆಚ್ಚಾಗುತ್ತಿದೆ.

ಇಂದು ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನ ಕ್ರಿಕೇಟ್ ರಣಬೇಟೆ ಸಂಜೆ 7:30 ಗೆ ನಡೆಯಲಿದೆ.

ಎರಡೂ ತಂಡಗಳಿಗೂ ಹೊಸಬರು ನಾಯಕರಾಗಿದ್ದು, ಸೌತ್ ಆಫ್ರಿಕಾದ  ಆಟಗಾರ ಫಾಫ್ ಡುಪ್ಲೆಸಿಸ್ ಆರ್ಸಿಬಿ ನಾಯಕನಾಗಿದ್ದು, ಕನ್ನಡಿಗ ಮಯಾಂಕ್ ಅಗರವಾಲ್ ಪಂಜಾಬ್ ತಂಡದ ಸಾರಥ್ಯ ಹೊತ್ತಿದ್ದಾರೆ.

ಆರ್ಸಿಬಿ ಮತ್ತು ಪಂಜಾಬ್ ತಂಡಗಳು ಇದುವರೆಗೆ 28 ಪಂದ್ಯಗಳಲ್ಲಿ ಎದುರುಬದರಾಗಿವೆ, 13 ಪಂದ್ಯಗಳಲ್ಲಿ ಆರ್ಸಿಬಿ ಮತ್ತು 15 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ವಿಜಯಪತಾಕೆ ಹಾರಿಸಿವೆ.

ಇದುವರೆಗೆ ಐಪಿಎಲ್ ನಲ್ಲಿ ಆರ್ಸಿಬಿ 211 ಪಂದ್ಯಗಳಲ್ಲಿ 98 ರಲ್ಲಿ ಜಯ ಗಳಿಸಿದೆ. 106 ಪಂದ್ಯಗಳಲ್ಲಿ ಸೋಲು ಕಂಡಿದ್ದು, 3 ಪಂದ್ಯ ಟೈ ಆಗಿದೆ. 4 ಪಂದ್ಯಗಳ ಫಲಿತಾಂಶ ಬಂದಿಲ್ಲ. ಈ ಬಾರಿ ಕಪ್ ಆರ್ಸಿಬಿದಾ ? ಕಾದು ನೋಡಬೇಕು

Leave A Reply