ಪುತ್ತೂರಿನ ದರ್ಬೆಯಲ್ಲಿ ಮನೆಯಲ್ಲಿರದೆ ರಸ್ತೆಗೆ ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು
ಪುತ್ತೂರು : ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರ ಪರಿಸ್ಥಿತಿಯನ್ನು ಅರಿತು ಜನರಿಗೆ ತೊಂದರೆಯಾಗದಂತೆ ಮೆಡಿಕಲ್, ದಿನಸಿ ಸಾಮಾಗ್ರಿಗಳ ಅಗತ್ಯ ವಸ್ತುಗಳ ಖರೀದಿಗೆ ಪುತ್ತೂರಿನ ವಾರ್ಡ್ ವಾರು ಮಟ್ಟದಲ್ಲಿ ಸಮಯ ನಿಗದಿ ಮಾಡಲಾಗಿದೆ.
ಅಗತ್ಯ ವಸ್ತುಗಳನ್ನು ಖರೀದಿಸಲು ಅಗತ್ಯವಿದ್ದವರು ಮಾತ್ರ ಪೇಟೆಗೆ ಬಂದು ಸಾಮಾನು ಖರೀದಿಸಬಹುದು. ಆದರೆ ಇತರರು ಬರುವಂತಿಲ್ಲ ಎಂಬ ಕಟ್ಟಪ್ಪಣೆ ಇದ್ದರೂ ಜನರು ಮಾತ್ರ ಕ್ಯಾರೇ ಎನ್ನದೆ ಪೇಟೆಗೆ ಆಗಮಿಸುತ್ತಿರುವುದನ್ನು ಕಂಡ ಪೊಲೀಸ್ ರು ತಮ್ಮ ತಾಳ್ಮೆ ಕಳೆದುಕೊಂಡು ಅನಗತ್ಯವಾಗಿ ಪೇಟೆಗೆ ಆಗಮಿಸಿದ ವ್ಯಕ್ತಿಗಳನ್ನು ವಾಹನದಿಂದ ಕೆಳಗಿಳಿಸಿ ರಸ್ತೆಯಲ್ಲೇ ಸುಮಾರು ಹತ್ತು ಬಾರಿ ಭಸ್ಕಿ ವಿಧಿಸಿದ ದೃಶ್ಯಗಳು ದರ್ಬೆ ಜಂಕ್ಷನ್ ನಲ್ಲಿ ಕಂಡುಬಂದಿದೆ.
ಜನರು ಬಸ್ಕಿ ತೆಗೆದು, ಕೊನೆಯಲ್ಲಿ ಹೋಗುವಾಗ ಲಾಗಿಂತ ಇದೇ ಎಷ್ಟೋ ವಾಸಿ ಎಂದು ಹೇಳುತ್ತಾ ನಗುತ್ತಾ ಹೋಗುವುದು ಕಂಡುಬಂತು. ಪುತ್ತೂರಿನ ಪ್ರಜ್ಞಾವಂತ ಜನತೆ ರಾಜ್ಯದ ಇತರೆಡೆಯಂತೆ ಲಾಠಿಗೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸರ ನಂಬಿಕೆ.
It is not a big deal cialis coupon