ಬೆಳ್ತಂಗಡಿ : ಈಜಲು ಹೋದ ಯುವಕ ನೀರು ಪಾಲು ದಕ್ಷಿಣ ಕನ್ನಡ By Praveen Chennavara On Mar 13, 2022 Share the Article ಬೆಳ್ತಂಗಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅನಾರು ಎಂಬಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ್ಯುಂಜಯ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ನಡ್ತಿಲು ಹೊಯ್ಗೆಗದ್ದೆ ಜತ್ತನ್ನ ಎಂಬವರ ಪುತ್ರ ಸತೀಶ್ (35) ನೀರುಪಾಲಾಗಿದ್ದಾರೆ. ಅಡಕೆ ಕೊಯ್ಲು ಪರಿಣಿತನಾಗಿದ್ದ ಸತೀಶ್ ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.