Home Interesting ಒಮ್ಮೆ ಗಿನ್ನಿಸ್ ದಾಖಲೆ ಪಡೆದ ಜಗತ್ತಿನ ಅತ್ಯಂತ ಉದ್ದದ ಈ ಕಾರ್ ಮತ್ತೊಮ್ಮೆ ಸುದ್ದಿಯಲ್ಲಿ |ಸ್ವಿಮ್ಮಿಂಗ್...

ಒಮ್ಮೆ ಗಿನ್ನಿಸ್ ದಾಖಲೆ ಪಡೆದ ಜಗತ್ತಿನ ಅತ್ಯಂತ ಉದ್ದದ ಈ ಕಾರ್ ಮತ್ತೊಮ್ಮೆ ಸುದ್ದಿಯಲ್ಲಿ |ಸ್ವಿಮ್ಮಿಂಗ್ ಫೂಲ್, ಹೆಲಿಕಾಪ್ಟರ್ ಇರುವ ಈ ವಿಶೇಷ ಕಾರಿನ ವಿಡಿಯೋ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಜಗತ್ತಿನಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಹೊಂದಿರೋ ಪ್ರದೇಶ, ವಸ್ತುಗಳು ಎಲ್ಲರಿಗೂ ಇರೋ ಕುತೂಹಲದ ವಿಷಯ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ವಾಹನಗಳ ಕುರಿತು ಆಸಕ್ತಿ ಹೆಚ್ಚೇ.ಹೀಗಿರುವಾಗ ಈ ಮಾಹಿತಿ ನಿಮಗೆ ತಿಳಿಯಲೇ ಬೇಕಾದದ್ದು..ಹೌದು.ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾರ್ ಯಾವುದು ಗೊತ್ತಾ?ಇಲ್ಲಿದೆ ನೋಡಿ.

ಅತ್ಯಂತ ಉದ್ದವಾದ ಕಾರೇ ಸೂಮರ್ ಲಿಮೋಸಿನ್.
ವಿಶ್ವದಲ್ಲೇ ಅತಿ ಉದ್ದವಾದ ಕಾರ್ ಎಂಬ ಹೆಗ್ಗಳಿಕೆ ಹೊಂದಿದ್ದ ಈ ಕಾರ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಯಾಕೆಂದರೆ ಈ ಕಾರ್ ಉದ್ದವನ್ನು ಬರೋಬ್ಬರಿ 100 ಅಡಿಯಷ್ಟು ಹೆಚ್ಚಿಸಿಕೊಂಡಿದ್ದು ಗಿನ್ನಿಸ್ ದಾಖಲೆ ನಿರ್ಮಿಸಿದೆ.

ಆರಂಭದಲ್ಲಿ ಇದರ ನಿರ್ಮಾತೃ ಸಂಸ್ಥೆ 60 ಅಡಿ ಉದ್ದದ
ಕಾರನ್ನು ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಈಗ ಅದೇ ಕಾರನ್ನು 100 ಅಡಿ ಉದ್ದವಿಸ್ತರಿಸಿ ಹಳೆಯ ದಾಖಲೆಯನ್ನು ಮುರಿದಿದೆ. ಇದೀಗ ಗಿನ್ನಿಸ್ ರೆಕಾರ್ಡ್‌ನ ರಾಡಾರ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ಹಳೆಯ ದಾಖಲೆ ಮುರಿದು ಹೊಸದೊಂದು ದಾಖಲೆ ಮಾಡಿದೆ.

ಗಿನ್ನಿಸ್ ವರ್ಡ್ ರೆಕಾರ್ಡ್ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಇದರ ಬಗ್ಗೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಕಾರಿನಲ್ಲಿ ಸ್ವಿಮ್ಮಿಂಗ್ ಫೂಲ್, ಹೆಲಿಕಾಪ್ಟರ್‌ ಎಲ್ಲ ಇದೆ ಎಂದು ತೋರಿಸಲಾಗಿದೆ.

1986 ರಲ್ಲಿ ಅಮೆರಿಕದ ಕಸ್ಟಮೈಸರ್ ಜೇ ಓರ್ಬಗ್ ಈ ಕಾರನ್ನು ನಿರ್ಮಿಸಿದ್ದನು.ಈ ಉದ್ದದ ಕಾರನ್ನು ಸುಮಾರು
10ಕ್ಕೂ ಹೆಚ್ಚು ಟಾಟಾ ನ್ಯಾನೋ ಕಾರುಗಳನ್ನು ಜೋಡಿಸಿ ನಿರ್ಮಿಸಲಾಗಿದ್ದು,ಈ ಉದ್ದವಾದ ಕಾರನ್ನು ಅಮೇರಿಕನ್ ಡೀಮ್ ಸೇರಿದಂತೆ ಕೆಲವು ಹಾಲಿವುಡ್ ಸಿನೆಮಾಗಳಲ್ಲಿ ನೋಡಿರಬಹುದು.