ಶಾಲಾ ಸಮವಸ್ತ್ರದಲ್ಲಿಯೇ ಜ್ಯುವೆಲ್ಲರಿ ಶಾಪ್ ನಿಂದ 21,000 ರೂ. ಕದ್ದ ವಿದ್ಯಾರ್ಥಿನಿ !! | ಖತರ್ನಾಕ್ ಹುಡುಗಿಯ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share the Article

ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳು ಕಳ್ಳತನದಲ್ಲಿ ತೊಡಗಿರುವ ಕೆಲ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲಿ ಶಾಲಾ ಸಮವಸ್ತ್ರದಲ್ಲಿಯೇ ಜ್ಯುವೆಲ್ಲರಿ ಶಾಪ್ ಗೆ ಎಂಟ್ರಿ ಕೊಟ್ಟ ವಿದ್ಯಾರ್ಥಿನಿಯೊಬ್ಬಳು 21 ಸಾವಿರ ರೂಪಾಯಿ ನಯವಾಗಿಯೇ ಎಗರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ನೆಯ್ಯತಿಂಕರದಲ್ಲಿರುವ ಮೂಕಾಂಬಿಕ ಸಿಲ್ವರ್ ಪ್ಯಾಲೇಸ್ ಶಾಪ್‌ನಲ್ಲಿ ಗುರುವಾರ ಘಟನೆ ನಡೆದಿದೆ. 21,180 ರೂಪಾಯಿ ಕಳೆದುಕೊಂಡಿರುವುದಾಗಿ ಶಾಪ್ ಸಿಬ್ಬಂದಿ ತಿಳಿಸಿದ್ದಾರೆ. ಪ್ಯಾಂಟ್ ಮತ್ತು ಶರ್ಟ್ ಧರಿಸಿರುವ ಹುಡುಗಿ ಹಣ ಹಿಡಿದು ಶಾಪ್‌ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿನಿ ಅಂಗಡಿಗೆ ಬಂದಾಗ ಅಂಗಡಿಯಲ್ಲಿ ಒಬ್ಬ ಹಿರಿಯ ಉದ್ಯೋಗಿ ಮಾತ್ರ ಇದ್ದರು. ಘಟನೆ ವೇಳೆ ವೃದ್ಧ ಉದ್ಯೋಗಿ ಮಲಗಿದ್ದು, ಮತ್ತೊಬ್ಬರು ಬ್ಯಾಂಕ್‌ಗೆ ತೆರಳಿದ್ದರು. ಹುಡುಗಿ ಕ್ಯಾಶ್ ಕೌಂಟರ್ ತೆರೆದು ಕೈಯಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೊರಗೆ ಬಂದಿದ್ದಳು. ಬ್ಯಾಗ್‌ನಲ್ಲಿ ಕೀಲಿಗಳು ಮಾತ್ರ ಇರುವುದನ್ನು ಅರಿತು ಹಿಂತಿರುಗಿ ಕ್ಯಾಶ್ ಕೌಂಟರ್‌ನಲ್ಲಿದ್ದ ನೋಟುಗಳನ್ನು ಕದ್ದಿದ್ದಾಳೆ.

ಉದ್ಯೋಗಿ ಬ್ಯಾಂಕ್‌ನಿಂದ ಹಿಂತಿರುಗಿ ಟೇಬಲ್ ತೆರೆದಾಗ ಹಣ ಕಳೆದು ಹೋಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ. ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply