Home ದಕ್ಷಿಣ ಕನ್ನಡ ಕಡಬ: ಮನೆಯಂಗಳದಲ್ಲಿ ಕಂಡುಬಂತು ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ!! | ಹಾವನ್ನು ಸುರಕ್ಷಿತವಾಗಿ...

ಕಡಬ: ಮನೆಯಂಗಳದಲ್ಲಿ ಕಂಡುಬಂತು ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ!! | ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ವವಚ್ಚನ್

Hindu neighbor gifts plot of land

Hindu neighbour gifts land to Muslim journalist

ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಮನೆಯ ಅಂಗಳದಲ್ಲಿ ಕಂಡುಬಂದ ಘಟನೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ನಡೆದಿದೆ.

ಬಲ್ಯ ಗ್ರಾಮದ ತಿಪ್ಪ ಎಂಬವರ ಮನೆಯ ಅಂಗಳದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಈ ಬೃಹತ್ ಹಾವನ್ನು ವವಚ್ಚನ್ ಎಂಬವರು ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯ ಸಮ್ಮುಖದಲ್ಲಿ ಹಾವನ್ನು ಬಿಸ್ಲೆ ಘಾಟ್ ನ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.

ಹಾವನ್ನು ಹಿಡಿದ 47 ವರ್ಷ ಪ್ರಾಯದ ವವಚ್ಚನ್ ಅವರು ಪದವು ಮನೆ, ಪೆರಾಬೆ ಗ್ರಾಮದ ನಿವಾಸಿಯಾಗಿದ್ದು, ರಬ್ಬರ್ ಟ್ಯಾಪಿಂಗ್ ಹಾಗೂ ಕೃಷಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು 2019 ರಿಂದ ಇದುವರೆಗೆ ಸುಮಾರು 122 ವಿಷಕಾರಿ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವವಚ್ಚನ್ ಅವರನ್ನು ಸಂಪರ್ಕಿಸಲು 7760016529 ಕರೆ ಮಾಡಬಹುದಾಗಿದೆ.