90 ನಿಮಿಷ ತಡವಾಗಿ ಉಕ್ರೇನ್ ಗೆ ಬಂದಿಳಿದ ವ್ಯಕ್ತಿ | ಬಂದ ತಪ್ಪಿಗೆ ಬೆಲೆ ತೆತ್ತಿದ್ದಾನೆ ಈ ವ್ಯಕ್ತಿ !

Share the Article

ನಿಕೋಲಾ ಚಮಕ್ ಹಾಗೂ ಪತಿ ಪೀಟರ್ ಚಮಕ್ ಮೂಲತಃ ಉಕ್ರೇನ್ ನವರಾದರೂ ಸಹ ಅವರು ಹೆಚ್ಚಾಗಿ ಬ್ರಿಟನ್ ನಲ್ಲಿಯೇ ವಾಸವಿದ್ದರು. ಫೆಬ್ರವರಿ ಅಂತ್ಯದಲ್ಲಿ ಪೀಟರ್ ತಮ್ಮ ಪೋಷಕರನ್ನು ಭೇಟಿಯಾಗಲೆಂದು ಉಕ್ರೇನ್ ಗೆ ಆಗಮಿಸಿದ ಬಳಿಕ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

ಫೆ.24 ರ ರಾತ್ರಿ 10.30 ರ ಸುಮಾರಿಗೆ ಪೀಟರ್ ಉಕ್ರೇನ್ ಬಂದಿದ್ದಾರೆ. 90 ನಿಮಿಷ ತಡವಾಗಿ ಉಕ್ರೇನ್ ಗೆ ಇಳಿದಿದ್ದಾರೆ. ಉಕ್ರೇನ್ ರಾತ್ರಿ 9 ಗಂಟೆ ಸುಮಾರಿಗೆ ಸಮರ ಶುರು ಮಾಡಿತ್ತು. ನಂತರ 18 ರಿಂದ 60 ವರ್ಷದೊಳಗಿನ ಉಕ್ರೇನ್ ಪೌರತ್ವವನ್ನು ಹೊಂದಿರುವ ಪುರುಷರು ದೇಶವನ್ನು ತೊರೆಯುವುದನ್ನು ನಿಷೇಧಿಸಿತು.

ಒಂದು ವಾರ ಸಮಯವನ್ನು ತನ್ನ ಪೋಷಕರ ಜೊತೆ ಕಳೆಯಲು ಪೀಟರ್ ಬಂದಿದ್ದರು. ಆದರೆ ಆ ಕೂಡಲೇ ಉಕ್ರೇನ್ ನಲ್ಲಿ ಯುದ್ಧ ಪ್ರಾರಂಭವಾಗಿತ್ತು. ಬ್ರಿಟನ್ ನಲ್ಲಿರುವ ಅವರ ಪತ್ನಿ ಹಾಗೂ ಸ್ನೇಹಿತರು ಹೇಗಾದರೂ ಮಾಡಿ ಪೀಟರ್ ನನ್ನು ಉಕ್ರೇನ್ ನಿಂದ ಹೊರತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಉಕ್ರೇನ್ ಇಷ್ಟು ದಿಢೀರಾಗಿ ಕಾನೂನನ್ನು ಬದಲಾಯಿಸುತ್ತದೆ ಎಂದು ನಾವು ಯಾರೂ ಊಹಿಸಿಲ್ಲ ಎಂದು ಪೀಟರ್ ಪತ್ನಿ ಹೇಳಿದ್ದಾರೆ.

Leave A Reply