ಬೆಳ್ಳಾರೆ : ಮರದಿಂದ ಬಿದ್ದು ವ್ಯಕ್ತಿ ಮೃತ್ಯು

Share the Article

ಸುಳ್ಯ : ಮುಪ್ಪೇರಿಯ ಗ್ರಾಮದ ಪಾಜಪಳ್ಳ ಎಂಬಲ್ಲಿ ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿಯೋರ್ವ ರು ಮೃತಪಟ್ಟ ಘಟನೆ ಮಾ.6 ರಂದು ಸಂಜೆ ನಡೆದಿದೆ.

ಕಾಪುತಡ್ಕಮಾಧವ (32) ಎಂಬವರು ಪಾಜಪಳ್ಳ ರಾಜೇಂದ್ರಪ್ರಸಾದ್ ಎಂಬವರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋದವರು ಅಲ್ಲಿ ತೋಟದಲ್ಲಿ ಮರದ ಗೆಲ್ಲನ್ನು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಬಿದ್ದು ಗಾಯಗೊಂಡರು.

ತೀವ್ರ ಗಾಯಗೊಂಡ ಇವರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಮಾಧವರು ಮೃತ ಪಟ್ಟಿರುವುದಾಗಿ ತಿಳಿಸಿದರೆನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಮಾಧವರ ಪತ್ನಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

Leave A Reply