ಸಿವಿಲ್ ಇಂಜಿನಿಯರಿಂಗ್ ನಲ್ಲಿ 16 ಗೋಲ್ಡ್ ಮೆಡಲ್ ಪಡೆದ ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಗೆ ಅವಮಾನ!! ಹಿಜಾಬ್ ವಿಚಾರದಲ್ಲಿ ಆಕೆಯನ್ನೇ ಟ್ರೋಲ್ ಮಾಡುತ್ತಿರುವ ಕಾಣದ ಕೈ ಯಾವುದು!?

ಬಿಸಿಲನಾಡು ಎಂದು ಪ್ರಸಿದ್ಧಿ ಪಡೆದ ನಾಡೆಂದರೆ ಅದು ರಾಯಚೂರು ಜಿಲ್ಲೆ‌. ಈ ರಾಜ್ಯಕ್ಕೆ ಹಿಂದುಳಿದ ಜಿಲ್ಲೆ ಎಂಬ ಮಾತು ಕೂಡಾ ಇದೆ. ಅದರಲ್ಲೂ ಶೈಕ್ಷಣಿಕ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವುದು ಮರಿಚಿಕೆ ಎನ್ನುವ ಮಾತುಗಳು ಇದ್ದವು. ಆದರೆ ಈ ಮಾತನ್ನು ಬುಶ್ರಾ ಮತೀನ್ ಎನ್ನುವ ವಿದ್ಯಾರ್ಥಿನಿ ಅಳಿಸಿ ಹಾಕಿದ್ದಾಳೆ. ಆದರೆ ಬುಶ್ರಾ ಈ ಎಲ್ಲಾ ದಾಖಲೆಗಳನ್ನು ಛಿದ್ರಗೊಳಿಸಿ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಆದರೆ ವಿಟಿಯು ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ ಬುಶ್ರಾ ಮತೀನ್ ಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಕೋರ್ಟ್ ನಲ್ಲಿರುವ ಹಿಜಾಬ್ ವಿಚಾರವನ್ನು ಕೆಲ ಕಿಡಿಗೇಡಿಗಳು ಮುಂದಿಟ್ಟುಕೊಂಡು ಬುಶ್ರಾ ಮತೀನ್ ಅವರನ್ನು ‘ಹಿಜಾಬೀಸ್ ರಾಕ್ಸ್ ‘ ಅಂತ ನೆಗೆಟಿವ್ ಟ್ರೋಲ್ ಮಾಡಿದ್ದಾರೆ.

ಬುಶ್ರಾ ಮತೀನ್ ರಾಯಚೂರು ನಗರದ ನಿವಾಸಿ. ಈಕೆ ಜಹರುದ್ದೀನ್ ಎಂಬುವವರ ಪುತ್ರಿ. ರಾಯಚೂರು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುವ ಈಕದ ಸಿವಿಲ್ ಇಂಜಿನಿಯರಿಂಗ್ ನ ಎಲ್ಲಾ 8 ಸೆಮಿಸ್ಟರ್ ಗಳಲ್ಲಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿನಿ.

ಇದರ ಜೊತೆಗೆ ವಿವಿಧ ವಿಷಯಗಳಲ್ಲಿ ವಿನೂತನ ಸಾಧನೆ ಮಾಡಿ ಒಟ್ಟು‌16 ಗೋಲ್ಡ್ ಮೆಡಲ್ ಪಡೆಯುವ ಮೂಲಕ ಹೊಸ ದಾಖಲೆ
ಮಾಡಿದ್ದಾಳೆ.

Leave A Reply

Your email address will not be published.