ಯುಕ್ರೇನ್ ನಿಂದ ಭಾರತಕ್ಕೆ ಬರಲು ಈತನಿಗೆ ಹೆಂಡತಿಯೇ ಸಮಸ್ಯೆ!

Share the Article

ಭಾರತ ಯುಕ್ರೇನ್ ನಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ಕೇಂದ್ರ ಸರಕಾರ ಅಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ಇಲ್ಲೊಬ್ಬ ಭಾರತೀಯ ವ್ಯಕ್ತಿಗೆ ಮಾತ್ರ ಸ್ವದೇಶಕ್ಕೆ ಮರಳಲು ಆಗದ ಪರಿಸ್ಥಿತಿ ಎದುರಾಗಿದೆಯಂತೆ.

ಇವರ ಈ ಸಮಸ್ಯೆಗೆ ಕಾರಣ ಬೇರಾರೂ ಅಲ್ಲ ಅವರ ಪತ್ನಿ. ಗಗನ್ ಎಂಬ ವ್ಯಕ್ತಿ ಪತ್ನಿಯ ಕಾರಣದಿಂದಾಗಿ ಭಾರತಕ್ಕೆ ಬರಲಾಗದೆ ಪರದಾಡುತ್ತಿದ್ದಾರೆ‌. ಈ ಬಗ್ಗೆ ಖುದ್ದು ಅವರೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ, ‘ ನಾನು ಭಾರತೀಯ. ನಾನು ಭಾರತಕ್ಕೆ ಹೋಗಬಹುದು. ಆದರೆ ನನ್ನ ಪತ್ನಿ ಭಾರತಕ್ಕೆ ಹೋಗಲು ಸಾಧ್ಯವಿಲ್ಲ. ಕಾರಣವೇನೆಂದರೆ ಆಕೆ ಯುಕ್ರೇನಿನ ಪ್ರಜೆ. ನನ್ನ ಪತ್ನಿ‌ 8 ತಿಂಗಳ ಗರ್ಭಿಣಿ. ಆಕೆಯನ್ನು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ನಾನಿಲ್ಲ. ಹಾಗಾಗಿ ನಾನು ಪೋಲಂಡ್ ಗೆ ಹೋಗುವ ಯೋಚನೆಯಲ್ಲಿದ್ದೇನೆ. ಸದ್ಯಕ್ಕೆ ಈಗ ಗಗನ್ ಅವರು ಗೆಳೆಯರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿದ್ದಾರೆ.

Leave A Reply