ಟೂತ್‌ಪೇಸ್ಟ್ ಟ್ಯೂಬ್ ನಲ್ಲಿರೋ ಕೆಂಪು, ನೀಲಿ, ಹಸಿರು ಮತ್ತು ಕಪ್ಪುಗುರುತುಗಳ ಕಿರುಪರಿಚಯ ನಿಮಗಾಗಿ|
ಪೇಸ್ಟ್ ನ್ನು ತಯಾರಿಸುವ ಕಂಪನಿಗಳು ಅವುಗಳ ಮೇಲೆ ತಮ್ಮ ಗುರುತನ್ನು ಮಾಡುತ್ತಾರೆ. ಇದು ಟೂತ್ ಪೇಸ್ಟ್ ಒಂದಕ್ಕಿಂತ ಇನ್ನೊಂದು ಎಷ್ಟು ಭಿನ್ನ ಎಂದು ಈ ಬಣ್ಣಗಳು ಹೇಳುತ್ತದೆ. ಟೂತ್ ಪೇಸ್ಟ್ ಟ್ಯೂಬ್ ನಲ್ಲಿ ವಿವಿಧ ಬಣ್ಣದ ಬ್ಲಾಕ್ ಗಳ ಅರ್ಥವೇನು ?
ಟೂತ್ ಪೇಸ್ಟ್ ನಲ್ಲಿ ವಿವಿಧ ಬಣ್ಣಗಳು ಇರುತ್ತದೆ. ಇದೆಲ್ಲಾ ನೀವು ಗಮನಿಸಿರಬಹುದು. ಉದಾಹರಣೆಗೆ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳು ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇವುಗಳು ಒಂದೊಂದೇ ಅರ್ಥವನ್ನು ಹೊಂದಿದೆ. ಪೇಸ್ಟ್ ನ ನಿರ್ದಿಷ್ಟ ವಿಷಯ ವಿವರಿಸಲು, ಟೂತ್ ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತು ಮಾಡುತ್ತದೆ. ಇವುಗಳ ಅರ್ಥವೇನೆಂದು ನಾವು ತಿಳಿಯೋಣ ಬನ್ನಿ .
ಕೆಂಪುಬಣ್ಣದ ಬ್ಲಾಕ್ ಬಗ್ಗೆ ತಿಳಿಯೋಣ : ಈ ಬಣ್ಣ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳು ಈ ಎರಡನ್ನು ಬೆರೆಸಿ ಈ ಟೂತ್ ಪೇಸ್ಟ್ ಮಾಡಲಾಗಿದೆ ಎಂದರ್ಥ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಟೂತ್ ಪೇಸ್ಟ್ ಮಾತ್ರ ಬಳಸುವವರಿಗೆ ಈ ಟೂತ್ ಪೇಸ್ಟ್ ಅಲ್ಲ.
ಹಸಿರು ಬಣ್ಣದ ಬ್ಲಾಕ್ : ಇದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಲಟ್ಟಿದೆ ಎಂದು ಅರ್ಥ.
ನೀಲಿ ಬ್ಲಾಕ್ ನ ಅರ್ಥ : ಟ್ಯೂಬ್ ಮೇಲೆ ನೀಲಿ ಗುರುತು ಇದ್ದರೆ ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತಯಾರಿಸಲ್ಪಟ್ಟಿದೆ ಎಂದು ಅರ್ಥ. ನಿರ್ದಿಷ್ಟ ರೀತಿಯ ಪೇಸ್ಟ್ ನ್ನು ಬಳಸಲು ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಬಳಸುವುದು ಒಳ್ಳೆಯದು.
ಕಪ್ಪು ಬ್ಲಾಕ್ ನ ಅರ್ಥ : ಈ ಟೂತ್ ಪೇಸ್ಟ್ ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ.
ಆದ್ದರಿಂದ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ವಿವಿಧ ಬಣ್ಣದ ಗುರುತು ಇರುವ ಪೇಸ್ಟ್ ಗಳನ್ನು ನೀವು ಆಯ್ಕೆ ಮಾಡಬಹುದು.
ಕೆಂಪು – ನೈಸರ್ಗಿಕ ಮತ್ತು ರಾಸಾಯನಿಕ
ಹಸಿರು – ನೈಸರ್ಗಿಕ ಪದಾರ್ಥ ಮಾತ್ರ.
ನೀಲಿ – ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿ
ಕಪ್ಪು – ರಾಸಾಯನಿಕಗಳಿಂದ ಮಾತ್ರ ಎಂದು ಅರ್ಥ.