ಪುತ್ತೂರು: ಅಡುಗೆ ಮಾಡುವಾಗ ಬಟ್ಟೆಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು !!

Share the Article

ಪುತ್ತೂರು : ಒಲೆಯಲ್ಲಿ ಅಡುಗೆ ಮಾಡುವಾಗ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ‌ ಗಂಭೀರ ಗಾಯವಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟ ಘಟನೆ ಕಬಕ ಗ್ರಾಮದಲ್ಲಿ ನಡೆದಿದೆ.

ಪೆರಿಯತ್ತೋಡಿ ದಿ.ರಾಮಣ್ಣ ಎಂಬುವವರ ಪತ್ನಿ ಕಮಲ( 59 ) ಮೃತ ಪಟ್ಟವರು.

ಮಾ .4 ರಂದು ಮಧ್ಯಾಹ್ನ 1.30 ಗಂಟೆಗೆ ಕಮಲ ಅವರು ಮನೆಯಲ್ಲಿ ತಿನ್ನಲು ಮಣ್ಣಿ ತಯಾರಿಸುತ್ತಿರುವ ವೇಳೆ ಆಕಸ್ಮಿಕವಾಗಿ ನೈಟಿಗೆ ಬೆಂಕಿ ತಗುಲಿದೆ. ಈ ವೇಳೆ ಮೈತುಂಬಾ ಬೆಂಕಿ ಹರಡಿ ಸುಟ್ಟು ಗಂಭೀರ ಗಾಯಗಳಾಗಿತ್ತು .ಅವರನ್ನು ಕೂಡಲೇ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.ಇವರು ಪುತ್ರರಾದ ದಯಾನಂದ, ಚಂದ್ರ, ಸುರೇಶ್,ಶಿವಾನಂದರನ್ನು ಅಗಲಿದ್ದಾರೆ.

Leave A Reply