Home Entertainment ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ...

ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ ನೀವು ಹೌಹಾರೋದಂತು ಖಂಡಿತ!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟಿಯರು ವಿಭಿನ್ನ ಸ್ಟೈಲಿಶ್ ಬಟ್ಟೆಗಳನ್ನು ಧರಿಸುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಿಲ್ಲ. ಏಕೆಂದರೆ ಅವರ ಬಟ್ಟೆ ಡಿಸೈನ್ ಮಾಡುವವರೇ ಖ್ಯಾತ ಡಿಸೈನರ್ ಗಳು. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ಟ್ರೋಲಿಗೊಳಗಾಗುವುದು ಸಾಮಾನ್ಯ. ಅದೇ ರೀತಿಯಲ್ಲಿ ಬಾಲಿವುಡ್ ನ ಬೇಬೋ ಕರೀನಾ ಕಪೂರ್ ಇತ್ತೀಚೆಗೆ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಳದಿ ಬಣ್ಣದ ಟೂ ಪೀಸ್ ಕಲರ್ ಕೋ ಆರ್ಡ್ ( ಕಾಲರ್ ನಿಂದ ಕೆಳಗಿನವರೆಗೂ ಒಂದೇ ರೀತಿಯ ಬಟ್ಟೆಯ ಫ್ಯಾಬ್ರಿಕ್ ತೊಡುಗೆ) ಬಟ್ಟೆಯ ಜೊತೆ ಮ್ಯಾಚಿಂಗ್ ಸರವನ್ನು ಹಾಕಿ ಕ್ಯಾಮೆರಾಗೆ ಫೋಸ್ ನೀಡಿರುವ ಕರೀನಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಈ ಡಿಸೈನರ್ ಬಟ್ಟೆಯ ವಿನ್ಯಾಸಗಾರ್ತಿ ಲಕ್ಷ್ಮೀ ಲೆಹ್ರ್. ಬಾಲಿವುಡ್ ನಲ್ಲಿ ಭಾರೀ ಫೇಮಸ್ ಡಿಸೈನರ್ ಈಕೆ. ಈಗ ಕರೀನಾ ಹಾಕಿರುವ ಈ ಡ್ರೆಸ್ ಕೆಲವರಿಗೆ ಇಷ್ಟ ಆಗಿದ್ದರೂ ಕೆಲವರಿಗೆ ಇಷ್ಟ ಆಗಿಲ್ಲ. ಇನ್ನು ಈ ಡ್ರೆಸ್ ಬೆಲೆ ಕೇಳಿದರೆ ನೀವು ಹೌಹಾರುವುದಂತೂ ಸತ್ಯ. ಕೇವಲ ಎರಡು ತುಣುಕು ಬಟ್ಟೆಗೆ ಕರೀನಾ ಕೊಟ್ಟ ಮೊತ್ತ ಬರೋಬ್ಬರಿ 70,000 ರೂಪಾಯಿ. ಈ ಬಟ್ಟೆಯಲ್ಲಿ ಅಂಥದ್ದೇನಿದೆ. ನೋಡೋಕೆ ಸಭ್ಯವಾಗಿಯೂ ಇಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.