Home Interesting 82 ರ ವೃದ್ಧ ನಿವೃತ್ತ PWD ಅಧಿಕಾರಿ 36 ರ ಹರೆಯದ ವಿಧವೆಯ ಪ್ರೇಮದಲ್ಲಿ ಬಿದ್ದ...

82 ರ ವೃದ್ಧ ನಿವೃತ್ತ PWD ಅಧಿಕಾರಿ 36 ರ ಹರೆಯದ ವಿಧವೆಯ ಪ್ರೇಮದಲ್ಲಿ ಬಿದ್ದ ಪರಿ!

Hindu neighbor gifts plot of land

Hindu neighbour gifts land to Muslim journalist

82 ವರ್ಷದ ವ್ಯಕ್ತಿಯೊಬ್ಬ ತನಗಿಂತ 46 ವರ್ಷ ಕಿರಿಯಳ ಲವ್ವಲ್ಲಿ ಬಿದ್ದಿದ್ದಾರೆ. ಪಿಡ್ಬ್ಲುಡಿ‌ ನಿವೃತ್ತ ಅಧಿಕಾರಿಯಾಗಿದ್ದು, ನೋಡಿಕೊಳ್ಳಲು ಯಾರೂ ಇಲ್ಲದೇ ಒಂಟಿ ಜೀವನ ನಡೆಸುತ್ತಿದ್ದರು. ಮಹಿಳೆ ಕೂಡಾ ವಿಧವೆಯಾಗಿದ್ದು, ಆಕೆಗೆ ಒಬ್ಬ ಮಗ ಕೂಡಾ ಇದ್ದಾನೆ. ಇವರಿಬ್ಬರು ಮೊದಲು ಸ್ನೇಹದಲ್ಲಿ ಬಿದ್ದಿದ್ದು ನಂತರ ಪ್ರೀತಿಯಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ.

ಇವರಿಬ್ಬರು ವಿವಾಹವಾಗುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ‌ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯದ ಆವರಣದಲ್ಲಿ ಈ ಅಪೂರ್ವ ಮದುವೆಯನ್ನು ವೀಕ್ಷಿಸಲು ಹಾಗೂ ಫೋಟೋ ವೀಡಿಯೋ ಮಾಡಲು ಜನಸಾಗರವೇ ಹರಿದುಬಂದಿತ್ತು. ಆದರೆ ನೆರೆದಿದ್ದ ಜನಸ್ತೋಮ ಹಾಗೂ ಮಾಧ್ಯಮದವರನ್ನು ನೋಡಿ ಈ ನವಜೋಡಿಗೆ ಸಿಟ್ಟು ಬಂದಿತ್ತು. ಗುಂಪನ್ನು ಕಂಡು ನಮ್ಮನ್ನು ಮನರಂಜನೆಯ ಸಾಧನ ಎಂದು ಪರಿಗಣಿಸಬೇಡಿ ಎಂಬ ವೃದ್ಧರು ಹೇಳಿದ್ದಾರೆ.

1999 ರಲ್ಲಿ ಪಿಡಬ್ಲ್ಯುಡಿ ವಿಭಾಗದ ಮುಖ್ಯ ಹುದ್ದೆಯಲ್ಲಿದ್ದ 82 ರ ಈ ವೃದ್ಧರು ನಿವೃತ್ತರಾಗಿ ನಗರದ ವಲ್ಲಭ ನಗರದಲ್ಲಿ ವಾಸವಾಗಿದ್ದಾರೆ. ಹೆಂಡತಿ ಮಕ್ಕಳಿಲ್ಲದ ಇವರು ಒಂಟಿಯಾಗಿ ಜೀವನ ಸವೆಸುತ್ತಿದ್ದಾರೆ. ತಿಂಗಳಿಗೆ 28 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.

ಈ ನವ ಜೋಡಿ ಉಜ್ಜಯಿನಿ ಜಿಲ್ಲೆಯ ನಿವಾಸಿಗಳು. ಇಬ್ಬರೂ ತಮ್ಮ ಗುರುತನ್ನು ರಹಸ್ಯವಾಗಿಡುವ ಬಗ್ಗೆ ಮನವಿ ಮಾಡಿದ್ದಾರೆ.