ಮದುವೆಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ವಧು-ವರರು !! | ಪರಸ್ಪರ ಹೊಡೆದಾಡಿಕೊಳ್ಳಲು ಕಾರಣ ಏನು ಗೊತ್ತಾ??
ಈ ಇಂಟರ್ನೆಟ್ ಯುಗವೇ ಹಾಗೆ, ಕೂತರೂ ಸುದ್ದಿ… ಎದ್ದರೂ ಸುದ್ದಿ. ದಿನ ಬೆಳಗಾದರೆ ಸಾಕು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವೀಡಿಯೋಗಳು ರಾರಾಜಿಸುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ವೀಡಿಯೋಗಳು ನಮ್ಮ ಮನಸ್ಸಿಗೆ ಸಣ್ಣಗೆ ಕಚಗುಳಿಯಿಟ್ಟರೆ, ಇನ್ನು ಕೆಲವು ದೃಶ್ಯಗಳನ್ನು ನೋಡಿದರಂತೂ ನಗು ತಡೆಯುವುದೇ ಇಲ್ಲ. ಅದೇ ರೀತಿ ಸಾಕಷ್ಟು ಭಾವನಾತ್ಮಕ ವೀಡಿಯೋಗಳು ಕೂಡಾ ನೆಟ್ಟಿಗರ ಮನಮುಟ್ಟುತ್ತವೆ.
ಅಂತೆಯೇ ಇಲ್ಲಿ ಮದುವೆಯ ವೀಡಿಯೋವೊಂದು ವೈರಲ್ ಆಗಿದೆ. ಮದುವೆ ಎಂದ ಕೂಡಲೇ ಅಲ್ಲಿ ಹಾಡು, ಕುಣಿತ, ತಮಾಷೆ, ಸಂತೋಷ ಕಣ್ಣ ಮುಂದೆ ಬರುತ್ತದೆ. ಅಬ್ಬಬ್ಬಾ ಅಂದರೆ ವಧುವನ್ನು ಬೀಳ್ಕೊಡುವ ವೇಳೆ ಸ್ವಲ್ಪ ಭಾವಾನಾತ್ಮಕ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ, ವೈರಲ್ ಆದ ವೀಡಿಯೋದಲ್ಲಿ ವಧು ವರರು ಮಂಟಪದಲ್ಲಿಯೇ ಯರ್ರಾಬಿರ್ರಿ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದಾರೆ. ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವೈರಲ್ ವೀಡಿಯೋದಲ್ಲಿ , ಮದುವೆಯ ವೇದಿಕೆಯಲ್ಲಿ ವಧು-ವರರಿಬ್ಬರನ್ನೂ ನೋಡಬಹುದು. ಅಲ್ಲಿ ವಧು ಮತ್ತು ವರನ ಅನೇಕ ಸಂಬಂಧಿಕರು ಕೂಡಾ ಕಾಣಿಸುತ್ತಾರೆ. ಶಾಸ್ತ್ರದ ಪ್ರಕಾರ ವರ ವಧುವಿಗೆ ಸಿಹಿತಿಂಡಿ ತಿನ್ನಿಸಲು ಹೋಗುತ್ತಾನೆ. ಆದರೆ ವಧು ಅದನ್ನು ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ವರ ತಿಂಡಿಯನ್ನು ವಧುವಿನ ಮುಖದ ಮೇಲೆ ಎಸೆಯುತ್ತಾನೆ. ಇಷ್ಟಕ್ಕೆ ವಧು ಸುಮ್ಮನಿರಬೇಕಲ್ಲ. ವಧು ಕೂಡಾ ತಿಂಡಿಯನ್ನು ವರನ ಮುಖದ ಮೇಲೆ ಎಸೆಯುತ್ತಾಳೆ. ಇಲ್ಲಿಗೆ ವರನ ಕೋಪ ನೆತ್ತಿಗೇರಿದೆ. ಮದುವೆ ಮನೆ ಅನ್ನುವುದನ್ನೂ ಲೆಕ್ಕಿಸದೆ ವಧುವಿನ ಕಪಾಳಕ್ಕೆ ಬಾರಿಸಿದ್ದಾನೆ.
ಈ ವೀಡಿಯೋದಲ್ಲಿ ವಧು-ವರರ ನಡುವಿನ ಜಗಳ ನೋಡಿ ಅತಿಥಿಗಳಂತೂ ಬೆಕ್ಕಸ ಬೆರಗಾಗಿದ್ದಂತೂ ಸತ್ಯ. ಈ ವೀಡಿಯೊವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ್ದು, ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.