Home Breaking Entertainment News Kannada ತಾನೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ತೆರಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡದ ನಟಿ !!...

ತಾನೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ತೆರಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡದ ನಟಿ !! | ಸಾಮಾಜಿಕ ಜಾಲತಾಣದಲ್ಲಿ ಮಗು ಯಾವುದೆಂದು ರಿವೀಲ್ ಮಾಡಿದ ಪರಿಗೆ ಫಿದಾ ಆದ ನೆಟ್ಟಿಗರು

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಇದರ ಬೆನ್ನಲ್ಲೇ ಕನ್ನಡದ ಇನ್ನೊಂದು ನಟಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಆದರೆ ಆ ವಿಷಯವನ್ನು ರಿವೀಲ್ ಮಾಡಿದ ರೀತಿಗೆ ಫ್ಯಾನ್ಸ್ ಗಳು ಫಿದಾ ಆಗಿದ್ದಾರೆ. ಫ್ರೆಂಚ್ ಬಿರಿಯಾನಿ ಬ್ಯೂಟಿ ದಿಶಾ ಮದನ್ ಯಾವಾಗಲೂ ಡಿಫರೆಟ್ ಆಗಿ ತಮ್ಮ ಸ್ಪೆಷಲ್ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದು, ಈ ಬಾರಿ ಕೂಡ ತಮಗೆ ಹೆಣ್ಣು ಮಗುವಾದ ವೀಡಿಯೋವನ್ನು ಕ್ರಿಯೇಟಿವ್ ಆಗಿ ಮಾಡಿ ಶೇರ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ದಿಶಾ, ತಮ್ಮ ವಿಶೇಷವಾದ ವೀಡಿಯೋವೊಂದನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ, ತುಂಬು ಗರ್ಭಿಣಿಯಾದ ದಿಶಾ ಕಾರನ್ನು ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದರೆ, ನಂತರ ಅವರು ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿರುವುದನ್ನು ನೋಡಬಹುದು. ನಂತರ ದಿಶಾ, ಪತಿ ಶಶಾಂಕ್ ಆಸ್ಪತ್ರೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿ ಇರುವುದನ್ನು ಸಹ ವೀಡಿಯೋದಲ್ಲಿ ನೋಡಬಹುದು.

ಕೊನೆಯಲ್ಲಿ ಶಶಾಂಕ್, ದಿಶಾ ಮತ್ತು ಅವರ ಮೊದಲ ಮಗ ವಿಹಾನ್ ಕೈಯನ್ನು ಒಬ್ಬೊಬ್ಬರಾಗಿಯೇ ತೆಗೆದು ಮಾರ್ಚ್ 01 2022, ಇದು ಹೆಣ್ಣು ಮಗು ಎಂದು ವುಡ್ ನಲ್ಲಿ ಬರೆದಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಕೊನೆಯಲ್ಲಿ ತಮ್ಮ ಮುದ್ದು ಹೆಣ್ಣು ಮಗುವಿನ ಮುಖವನ್ನು ತೋರಿಸಿದ್ದು, ಫುಲ್ ಸ್ಪೆಷಲ್ ಮತ್ತು ಕ್ರಿಯೇಟಿವ್ ಆಗಿ ವೀಡಿಯೋ ಮಾಡಲಾಗಿದೆ.

ಮಗಳ ಮುಖ ತೋರಿಸುವುದು ಅಲ್ಲದೇ ಮಗಳ ಹೆಸರು ‘ಅವಿರಾ’ ಎಂದು ರಿವೀಲ್ ಮಾಡುತ್ತಾರೆ. ನಂತರ ತನ್ನ ತಂಗಿಯನ್ನು ವಿಹಾನ್ ಎತ್ತಿಕೊಂಡಿರುವ ಫೋಟೋವನ್ನು ಸಹ ಈ ವೀಡಿಯೋದಲ್ಲಿ ಶೇರ್ ಮಾಡಲಾಗಿದೆ.
ದಂಪತಿಯ ಕ್ರಿಯೇಟಿವ್ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು ತಾಯಿ ಮತ್ತು ಮಗುವಿಗೆ ಆರೋಗ್ಯದ ಬಗ್ಗೆ ಕೆಲವು ಟಿಪ್ಸ್ ಕೊಟ್ಟಿದ್ದು, ಶುಭ ಹಾರೈಸಿದ್ದಾರೆ.

ಜನವರಿಯಲ್ಲಿ ದಿಶಾ ಸಖತ್ ಬೋಲ್ಡ್ ಲುಕ್‍ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳು ವೈರಲ್ ಆಗಿದ್ದವು. ಈ ಫೋಟೋ ನೋಡಿದ ಅಭಿಮಾನಿಗಳು ಫೋಟೋ ನೋಡಿ ಫಿದಾ ಆಗಿದ್ದರು. ಫೋಟೋಗಳನ್ನು ಶೇರ್ ಮಾಡಿದ ಅವರು, ಮಾರ್ಚ್ 2022ಕ್ಕೆ ಕಾಯುತ್ತಿರುವೆ. ಮೂರರಿಂದ ನಾಲ್ವರಾಗುತ್ತಿದ್ದೇವೆ. 2022ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡು ತಾವು 2ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಹಂಚಿಕೊಂಡಿದ್ದರು.

ದಿಶಾ ಮದನ್ ಹಾಗೂ ಪತಿ ಶಶಾಂಕ್ ವಾಸುಕಿ ಗೋಪಾಲ್ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ಪುತ್ರ ವಿಹಾನ್ ಜನಿಸಿದ್ದು, 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ಮಾಡಿದ್ದು, ಇದೀಗ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ.