Home latest ತಾಯಿಯ ಅಕ್ರಮ ಸಂಬಂಧ ತಿಳಿದಿದ್ದ ಮಗನ ಕತ್ತಿನ ಮೇಲೆ ಕಾಲಿಟ್ಟು ಕೊಂದ ಪಾಪಿ ಅಮ್ಮ!

ತಾಯಿಯ ಅಕ್ರಮ ಸಂಬಂಧ ತಿಳಿದಿದ್ದ ಮಗನ ಕತ್ತಿನ ಮೇಲೆ ಕಾಲಿಟ್ಟು ಕೊಂದ ಪಾಪಿ ಅಮ್ಮ!

Hindu neighbor gifts plot of land

Hindu neighbour gifts land to Muslim journalist

ಕೊಪ್ಪಳ:ತಾಯಿಯ ಅಕ್ರಮ ಸಂಬಂಧ ತಿಳಿದಿದ್ದ ತನ್ನ ಮಗನನ್ನೇ ಹೆತ್ತಬ್ಬೆ ಕೊಲೆ ಮಾಡಿಸಿರುವ ಭಯಾನಕ ಘಟನೆ ದೋಟಿಹಾಳ ಗ್ರಾಮದಲ್ಲಿ ನಡೆದಿದೆ.

22ವರ್ಷದ ಬಸವರಾಜ್ ಮೃತ ಯುವಕ ಎಂದು ತಿಳಿದು ಬಂದಿದೆ.

60ರ ಹರೆಯದ ಈತನ ತಾಯಿ ಅಮರಮ್ಮ ದೋಟಿಹಾಳ ಪಂಚಾಯ್ತಿ ಸದಸ್ಯ ಅಮರಪ್ಪ ಕಂದಗಲ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಅಮರಪ್ಪ ಮತ್ತು ಅಮರಮ್ಮ ಜೊತೆಯಾಗಿ ಇರುವುದನ್ನು ಪುತ್ರ ಬಸವರಾಜ್ ನೋಡಿದ್ದು,ಅಮರಪ್ಪ ಇದನ್ನು ಪ್ರಶ್ನೆ ಮಾಡಿದ್ದಾನೆ.

ಈ ವೇಳೆ ಬಸವರಾಜ್ ತಾಯಿ, ಅಮರಪ್ಪನ ಸಹಾಯದಿಂದ ಕತ್ತಿನ ಮೇಲೆ ಕಾಲಿಟ್ಟು ಮಗನನ್ನು ಕೊಲೆ ಮಾಡಿದ್ದಾಳೆ. ನಂತರ ಹಿರಿಯ ಮಗನ ಸಹಾಯದಿಂದ ಬಸವರಾಜ್ ನ ಮೃತದೇಹ ಮುಚ್ಚಿ ಹಾಕಿದ್ದಾರೆ.ಈ ಕುರಿತು ತಾವರೆಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.