Home ದಕ್ಷಿಣ ಕನ್ನಡ ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಮಂಗಳೂರು ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

Hindu neighbor gifts plot of land

Hindu neighbour gifts land to Muslim journalist

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ದಿನಾಂಕ ಮಾ.01ರಂದು ಅಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.

ಕ್ಯಾಂಪ್ಕೋ ಸದಸ್ಯರಾದ ಶ್ರೀ ಅಚ್ಚುತ ಗೌಡ ಪಟ್ರಮೆ ಇವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 1,98,500/- ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಗೋವಿಂದ ಭಟ್, ಜನಾರ್ಧನ ಪೂಜಾರಿ, ಕ್ಯಾಂಪ್ಕೋ ಅಲಂಕಾರು ಶಾಖೆಯ ಶಾಖಾಧಿಕಾರಿ ಶ್ರೀ ಉದಯ ಬಿ ಆರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.