Home Health ಶೀತದಿಂದಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ 20 ವರ್ಷದ ಹಿಂದಿನದ್ದನ್ನು ಮರೆತುಹೋದ ಮಹಿಳೆ!

ಶೀತದಿಂದಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ 20 ವರ್ಷದ ಹಿಂದಿನದ್ದನ್ನು ಮರೆತುಹೋದ ಮಹಿಳೆ!

Hindu neighbor gifts plot of land

Hindu neighbour gifts land to Muslim journalist

ಶೀತ, ಜ್ವರ, ನೆಗಡಿ, ಕೆಮ್ಮು ಯಾರಿಗೆ ತಾನೇ ಬರಲ್ಲ ಹೇಳಿ ? ಇದಕ್ಕೆಲ್ಲಾ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಲ್ಲ ಜನ ಅಷ್ಟೊಂದು. ಆದರೆ ಇಲ್ಲೊಬ್ಬ ಮಹಿಳೆಗೆ ನೆಗಡಿ ಬಂದು ಬೆಳಗ್ಗೆ ಏಳುವಷ್ಟರಲ್ಲಿ ಕಳೆದ‌ 20 ವರ್ಷಗಳ ಎಲ್ಲಾ‌ ಘಟನೆಗಳನ್ನು ಮರೆತುಬಿಟ್ಟಿದ್ದಾರೆ! ಆಶ್ಚರ್ಯ ಆಯಿತೇ ? ಹೌದು ನಿಜ. ಶೀತದಿಂದ ಶುರಯವಾದ ಸಮಸ್ಯೆ ಆಕೆಯನ್ನು ಮಾರಣಾಂತಿಕ ರೋಗಕ್ಕೆ ಎಳೆದುಕೊಂಡು ಹೋಗಿದೆ.

ಈ ಘಟನೆ ನಡೆದಿರುವುದು ಇಂಗ್ಲೆಂಡ್ ನಲ್ಲಿ‌ ಈ ಬಗ್ಗೆ ಈ ಅನಾರೋಗ್ಯಕ್ಕೆ ತುತ್ತಾದ ಹೆಂಡತಿಯ ಬಗ್ಗೆ ಗಂಡನೇ ಮಾಹಿತಿ ನೀಡಿದ್ದಾನೆ.

ಆತನ ಪ್ರಕಾರ 2021 ರಲ್ಲಿ ಆತನ ಹೆಂಡತಿ ಕ್ಲೇರ್ ಮಫೆಟ್- ರೀಸ್ ಎಂಬ 43 ವರ್ಷದ ಮಹಿಳೆಗೆ‌ ಒಂದು ರಾತ್ರಿ ಆಕೆಯ ಮಗನಿಂದ ಶೀತ ಹರಡಿತ್ತು. ತಲೆನೋವು ಕೂಡಾ ಇದ್ದುದ್ದರಿಂದ ಅಂದು ಬೇಗ ಮಲಗಿದ ಆಕೆ ಬೆಳಗ್ಗೆ ಎದ್ದಾಗ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಒಂದು ವಾರದ ಚಿಕಿತ್ಸೆಯ ನಂತರ ಆಕೆಯನ್ನು ರಾಯಲ್ ಲಂಡನ್ ಆಸ್ಪತ್ರೆಯಿಂದ ವರ್ಗಾಯಿಸಲಾಯಿತು. ಅಲ್ಲಿ ಆಕೆಯ ಮೆದುಳಿಗೆ ರಕ್ತಸ್ತಾವವಾಗಿರಬಹುದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ನಂತರ ಹೆಚ್ಚಿನ ಪರೀಕ್ಷೆ ಮಾಡಿದಾಗ ಆಕೆ ಎನ್ಸೆಫಾಲಿಟಿಸ್ ನಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ.ರಾಯಲ್ ಆಸ್ಪತ್ರೆಗೆ ದಾಖಲಾದ ಎರಡು ವಾರಗಳ ನಂತರ ಆಕೆ 20 ವರ್ಷಗಳಿಂದ ಈಚೆಗೆ ನಡೆದಿದ್ದು ಯಾವುದೂ ನೆನಪಿರಲಿಲ್ಲ. ಆಕೆ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಳು.

ಈಕೆಗೆ ಈಗ ತನ್ನ‌ ಕುಟುಂಬದ ಸದಸ್ಯರ ನೆನಪು ಮಾತ್ರ ಇದೆ. ಆದರೆ ಮದುವೆ, ಗರ್ಭಧಾರಣೆ, ಹೆರಿಗೆ ಮತ್ತು ರಜಾದಿನಗಳಂತಹ ಪ್ರಮುಖ ಜೀವನದ ಘಟನೆಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೆ.

ಈಗ ಈಕೆ ಗುಣಮುಖ ಹೊಂದಿದ್ದು, ಸುದೀರ್ಘ ವಿರಾಮದ ಬಳಿಕ ಮತ್ತೆ ತನ್ನ ವೃತ್ತಿಯನ್ನು ಮುಂದುವರಿಸಿದ್ದಾರೆ. ಮರೆತು‌ಹೋದ ಘಟನೆಗಳ‌ ಬಗ್ಗೆ ಈಕೆ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ವಂತೆ‌.