Home Interesting ಪಾರ್ಕ್ ನಲ್ಲಿ ಕಳೆದುಹೋದ ಮಗುವನ್ನು ‘ಗೂಗಲ್ ಮ್ಯಾಪ್’ ಮೂಲಕ ಪತ್ತೆ ಹಚ್ಚಿದ ವ್ಯಕ್ತಿ| ಅಷ್ಟಕ್ಕೂ ಮಗು...

ಪಾರ್ಕ್ ನಲ್ಲಿ ಕಳೆದುಹೋದ ಮಗುವನ್ನು ‘ಗೂಗಲ್ ಮ್ಯಾಪ್’ ಮೂಲಕ ಪತ್ತೆ ಹಚ್ಚಿದ ವ್ಯಕ್ತಿ| ಅಷ್ಟಕ್ಕೂ ಮಗು ಡಸ್ಟ್ ಬಿನ್ ಒಳಗೆ ಹೋಗಿದ್ದಾದರೂ ಹೇಗೆ ?

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದ ಪಾರ್ಕ್ ನಲ್ಲಿ ಕಳೆದುಹೋದ ತನ್ನ ಮಗುವನ್ನು ಹುಡುಕುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಆಧುನಿಕ ಯುಗದಲ್ಲಿ ಈ ತಂತ್ರಜ್ಞಾನ ಬೆಳವಣಿಗೆ ಉಪಯೋಗಕ್ಕೆ ಬಂದಿದೆ.

ಈ ಗೂಗಲ್ ಮ್ಯಾಪ್ ನಿಂದಾಗಿ ಕೆಲ ಸಮಸ್ಯೆಗಳು ಉಂಟಾಗಿದ್ದೂ ಇದೆ. ಹಾಗೆಯೇ ಉಪಯೋಗ ಆಗಿದ್ದೂ ಇದೆ.

ಗೂಗಲ್ ಮ್ಯಾಪ್ ಮೂಲಕ ಮಗುವನ್ನು ಪಾರ್ಕ್ ನಲ್ಲಿ ಹುಡುಕುವ ವೀಡಿಯೋವನ್ನು ವ್ಯಕ್ತಿಯೊಬ್ಬರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗೂಗಲ್ ಮ್ಯಾಪ್ ನಲ್ಲಿ ಸ್ಥಳವನ್ನು ಹುಡುಕುತ್ತಿದ್ದಾಗ ಉದ್ಯಾನವನದ ಡಸ್ಟ್ ಬಿನ್ ನಲ್ಲಿ ಮಗು ಸಿಕ್ಕಿಹಾಕಿಕೊಂಡಿರುವುದು ವೀಡಿಯೋದಲ್ಲಿ ಕಂಡು ಬಂದಿದೆ‌.

ಇದರಲ್ಲಿ ಹುಡುಗನ ಮಸುಕಾದ ವೀಡಿಯೋವನ್ನು ಕಾಣಬಹುದು. ಇದರಲ್ಲಿ ಮಗುವಿನ ತಲೆಯು ದುಂಡಗಿನ ಹಸಿರು ಬಣ್ಣದ ಡಸ್ಟ್ ಬಿನ್ ನಿಂದ ಹೊರಬರುವುದನ್ನು ಕಾಣಬಹುದು. ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ ಸಾವಿರಾರು ಲೈಕ್ ಗಳು ಬಂದಿದೆ. ಅದೇ ಸಮಯದಲ್ಲಿ ಈ ವೀಡಿಯೋ ನೋಡಿದ ತುಂಬಾ ಜನರು ಬಹುಶಃ ಮಗು ಕಣ್ಣಾಮುಚ್ಚಾಲೆ ಆಡುತ್ತಿರಬಹುದು ಎಂದು ಹೇಳಿದ್ದಾರೆ. ಹಾಗಾಗಿ ಮಗು ಕಸದ ತೊಟ್ಟಿಯೊಳಗೆ ಹೋಗಿದ್ದಿರಬಹುದು ಎಂದು ಹೇಳಿದ್ದಾರೆ.