Home News ತವರು ಮನೆಯಲ್ಲಿ ತಾಯಿಯ ಸ್ಥಿತಿ ಕಂಡು ಮರುಕಗೊಂಡ ನವ ವಿವಾಹಿತೆ ಆತ್ಮಹತ್ಯೆ!! ಅಳುತ್ತಲೇ ಕೋಣೆಯೊಳಗೆ ಸೇರಿಕೊಂಡವಳು...

ತವರು ಮನೆಯಲ್ಲಿ ತಾಯಿಯ ಸ್ಥಿತಿ ಕಂಡು ಮರುಕಗೊಂಡ ನವ ವಿವಾಹಿತೆ ಆತ್ಮಹತ್ಯೆ!! ಅಳುತ್ತಲೇ ಕೋಣೆಯೊಳಗೆ ಸೇರಿಕೊಂಡವಳು ಮರಳಿ ಬರಲೇ ಇಲ್ಲ

Hindu neighbor gifts plot of land

Hindu neighbour gifts land to Muslim journalist

ಅನಾರೋಗ್ಯಕ್ಕೆ ಈಡಾಗಿ ನರಳುತ್ತಿರುವ ತಾಯಿಯ ಸ್ಥಿತಿಯನ್ನು ಕಂಡು ಮರುಗಿದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನ ಅಲ್ವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಲತಾ ಎಂಬವರ ಪುತ್ರಿ, ಕಿರಣ್ ಎಂಬವರ ಪತ್ನಿ ರೇವತಿ(28) ಎಂದು ಗುರುತಿಸಲಾಗಿದೆ.

ರೇವತಿಯನ್ನು ಕಳೆದ ವರ್ಷ ಕಿರಣ್ ಎಂಬವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ ಕೆಲ ತಿಂಗಳುಗಳ ಬಳಿಕ ತವರು ಮನೆಗೆ ಬಂದಾಗ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದದ್ದು ಗಮನಕ್ಕೆ ಬಂದಿದೆ. ಇದನ್ನು ಕಂಡ ರೇವತಿ ಅಳುತ್ತಾ ಕೊಠಡಿ ಸೇರಿದ್ದಳು.

ಇತ್ತ ಕೊಠಡಿಯೊಳಗೆ ಹೋದ ರೇವತಿ ಹೊರಗೆ ಬಾರದೆ ಇದ್ದುದನ್ನು ಕಂಡ ಮನೆ ಮಂದಿ ಬಾಗಿಲು ಬಡಿದಿದ್ದಾರೆ. ಯಾವುದೇ ಸೂಚನೆ ಬಾರದೆ ಇದ್ದಾಗ ಬಾಗಿಲು ಮುರಿದು ಒಳ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ದುರಂತ ಸಾವಿಗೆ ಈಡಾಗಿದ್ದನ್ನು ಕಂಡ ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು.