ಕೇವಲ ತುಂಡು ಕಬ್ಬು ತಿನ್ನೋ ಆಸೆ| ಬಾಲಕನ ಪ್ರಾಣವನ್ನೇ ಕಸಿದುಕೊಂಡಿತು| ಎಂತಹ ಕಲ್ಲುಹೃದಯದವರನ್ನು ಕರಗಿಸುತ್ತೆ ಈ ವೀಡಿಯೋ

Share the Article

ಬಾಲಕನೋರ್ವನಿಗೆ ಕಬ್ಬು ತಿನ್ನೋ ಆಸೆ ಆತನ ಪ್ರಾಣವನ್ನೇ ಕೊನೆಗಾಣಿಸಿತು. ಬರೀ ಒಂದು ಕಬ್ಬು ತಿನ್ನುವ ಆಸೆ 8 ವರ್ಷದ ಬಾಲಕನ ಪ್ರಾಣವನ್ನೇ ಕಸಿದುಕೊಂಡಿದೆ. ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇಂಥದ್ದೊಂದು ಹೃದಯವಿದ್ರಾವಕ ಘಟನೆ ನಡೆದಿದೆ.

ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 8 ವರ್ಷದ ಅನಿಲ್ ಹಣಬರ್ ಎಂಬಾತ ಸಾವಿಗೀಡಾಗಿದ್ದಾನೆ. ಕಬ್ಬು ತುಂಬಿಸಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಹಿಂದೆ ಓಡಿದ ಈ ಬಾಲಕ ಕಬ್ಬು ಎಳೆದುಕೊಳ್ಳುವ ಭರದಲ್ಲಿ ಬಿದ್ದು, ಟ್ರ್ಯಾಕ್ಟರ್ ಚಕ್ರದಡಿಗೆ ಸಿಲುಕಿದ್ದಾನೆ. ಬಾಲಕನ ಸೊಂಟದ ಭಾಗದ ಮೇಲೆ ಚಕ್ರ ಹಾದು ಹೋಗಿದ್ದು, ಈತ ನರಳಿ ಸಾವಿಗೀಡಾಗಿದ್ದಾನೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಗಾಯಗೊಂಡ ಬಾಲಕ ನರಳಾಡುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಎಂತಹ ಕಲ್ಲು ಹೃದಯವರಿಗೂ ಬೇಸರ ಉಂಟು ಮಾಡುತ್ತೆ ಈ ವೀಡಿಯೋ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

Leave A Reply