Home Entertainment ಅಬ್ಬಬ್ಬಾ! ನಟಿ ಸನ್ನಿಲಿಯೋನ್ ಪಾನ್ ಕಾರ್ಡ್ ಬಳಸಿ 2000 ರೂಪಾಯಿ ಸಾಲ ಪಡೆದ ಭೂಪ!!!

ಅಬ್ಬಬ್ಬಾ! ನಟಿ ಸನ್ನಿಲಿಯೋನ್ ಪಾನ್ ಕಾರ್ಡ್ ಬಳಸಿ 2000 ರೂಪಾಯಿ ಸಾಲ ಪಡೆದ ಭೂಪ!!!

Hindu neighbor gifts plot of land

Hindu neighbour gifts land to Muslim journalist

ಸನ್ನಿಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ‌ ಹೇಳಿ ? ನೀಲಿ ಚಿತ್ರಗಳಲ್ಲಿ ನಟಿಸಿ ಸಖತ್ ಹೆಸರು ಮಾಡಿದ ನಟಿ. ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಮೈ ತೋರಿಸುವಂತಹ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ. ಇಂತಿಪ್ಪಾ ಸ್ಟಾರ್ ನಟಿಯ ಪ್ಯಾನ್ ಕಾರ್ಡ್ ನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಎರಡು ಸಾವಿರ ಸಾಲ ಪಡೆದುಕೊಂಡಿದ್ದಾನೆ.

ಹೌದು ಜಸ್ಟ್ 2000 ರೂಪಾಯಿ ಸಾಲ ಪಡೆಯುವುದಕ್ಕೆ ಸನ್ನಿ ಲಿಯೋನ್ ಹೆಸರನ್ನು ಬಳಸಿಕೊಂಡಿದ್ದಾನೆ ಭೂಪ.

ಈ ಕುರಿತು ಸ್ವತಃ ನಟಿ ಸನ್ನಿಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ” ನನಗೇ ಈ ರೀತಿ ಆಗಿ ಬಿಟ್ಟಿದೆ. ಹುಚ್ಚರು, ಕೆಲವು ಮೂರ್ಖರು 2000 ರೂಪಾಯಿ ಸಾಲವನ್ನು ತೆಗೆದುಕೊಳ್ಳಲು ನನ್ನ ಪ್ಯಾನ್ ಕಾರ್ಡ್ ನ್ನು ಬಳಸಿಕೊಂಡಿದ್ದಾರೆ. ಇದರಿಂದ ನನ್ನ CIBIL ಸ್ಕೋರ್ ( SIC) ನ್ನು FCK ಮಾಡಿದ್ದಾರೆ” ಎಂದು ಬರೆದಿದ್ದಾರೆ.

ಬಾಲಿವುಡ್ ನಟಿ ಸನ್ನಿಲಿಯೋನ್ ಪ್ಯಾನ್ ಕಾರ್ಡ್ ನ್ನು‌ ಬಳಸಿಕೊಂಡಿರುವ ಆರೋಪಿ ಧಣಿ ಸ್ಟಾಕ್ಸ್ ಲಿಮಿಟೆಡ್ ಎಂಬ ಫೈನಾನ್ಸ್ ಸಂಸ್ಥೆಯ ಮೂಲಕ 2 ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾನೆ.

ಈ ಬಗ್ಗೆ ಟ್ವೀಟ್ ಮಾಡುತ್ತಿದ್ದ ಹಾಗೆ ಎಚ್ಚೆತ್ತುಕೊಂಡ ಸಂಸ್ಥೆ ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ಸನ್ನಿಲಿಯೋನ್ ನಂತರ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.