Home News ಪ್ರೀತಿಯ ತೇರು ಎಳೆದವನಿಗೆ ಸಾವಿನ ಸೂರು ತೋರಿಸಿದ ಪ್ರೇಯಸಿ-ಮಡದಿ!! ಅನೈತಿಕ ಸಂಬಂಧಕ್ಕೆ ಬಿದ್ದ ಮಡದಿ ಕೊಟ್ಟೇ...

ಪ್ರೀತಿಯ ತೇರು ಎಳೆದವನಿಗೆ ಸಾವಿನ ಸೂರು ತೋರಿಸಿದ ಪ್ರೇಯಸಿ-ಮಡದಿ!! ಅನೈತಿಕ ಸಂಬಂಧಕ್ಕೆ ಬಿದ್ದ ಮಡದಿ ಕೊಟ್ಟೇ ಬಿಟ್ಟಳು ಸುಪಾರಿ

Hindu neighbor gifts plot of land

Hindu neighbour gifts land to Muslim journalist

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಅದಾಗಲೇ ಇಬ್ಬರು ಬೆಳೆದುನಿಂತ ಮಕ್ಕಳಿದ್ದರು. ಖುಷಿಯಲ್ಲಿಯೇ ಸಾಗುತ್ತಿದ್ದ ಅವರ ದಾಂಪತ್ಯಕ್ಕೆ ಪರ ಪುರುಷನೊಬ್ಬನ ಎಂಟ್ರಿಯಾಗುತ್ತಲೇ ಅಲ್ಲೊಂದು ಕೊಲೆಯೇ ನಡೆದಿದ್ದು ಪ್ರೀತಿ ನೀಡಿ ಮನೆ ತುಂಬಿಸಿಕೊಂಡಿದ್ದ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಪಾಪಿಯಾಗಿದ್ದಾಳೆ.

ಹೌದು. ಜನವರಿ 31 ರ ಸೋಮವಾರದಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರಿನ ಬಳಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾದ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕ ಸ್ಪೋಟಕ ಮಾಹಿತಿಯ ಆಧಾರದಲ್ಲಿ ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್ ನನ್ನು ಬಂಧಿಸಲಾಗಿದೆ.ಬಂಧಿತರನ್ನು ಸುನೀತಾ ಹಾಗೂ ಆಕೆಯ ಸಹಚರ ಸಬ್ಸಿಡಿ ನವೀನ ಎಂದು ಗುರುತಿಸಲಾಗಿದೆ.

ಆರೋಪಿಗಳು

ಘಟನೆ ವಿವರ: ಮೃತ ಆನಂದ್ ಗೆ ಕೆಲ ವರ್ಷಗಳ ಹಿಂದೆ ಸುನೀತಾಳೊಂದಿಗೆ ಪ್ರೀತಿಯಾಗಿ ಬಳಿಕ ಒಬ್ಬರನ್ನೊಬ್ಬರು ಒಪ್ಪಿಕೊಂಡು ಮದುವೆಯಾಗಿದೆ. ಈ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ನಡುವೆ ಕೆಲ ದಿನಗಳಿಂದ ಯೋಗ ತರಗತಿಗೆ ತೆರಳುತ್ತಿದ್ದ ಸುನೀತಾಳಿಗೆ ಸಬ್ಸಿಡಿ ನವೀನನ ಪರಿಚಯವಾಗಿ ಆಕೆ ತನ್ನ ಪತಿ ಹಾಗೂ ಮಕ್ಕಳನ್ನು ಮರೆತು ಆತನೊಂದಿಗೆ ಸಲುಗೆಯಿಂದ ತಿರುಗುತ್ತಿದ್ದಳು.

ಮೃತ ಆನಂದ್

ತೋಟದ ಮನೆಯಲ್ಲಿ ಇಬ್ಬರೂ ಜೊತೆಯಾಗಿರುವಾಗ ಮೃತ ಆನಂದ್ ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇಲ್ಲಿಂದ ಪ್ರಾರಂಭವಾಗಿದೆ ಕೌಟುಂಬಿಕ ಕಲಹ.ಆ ಬಳಿಕ ಬುದ್ಧಿ ಹೇಳಿ ಸುನೀತಾಳನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದ್ದು, ಇದರಿಂದ ಕೋಪಗೊಂಡ ಸುನೀತಾ ತನ್ನ ಸಹಚರ ನವೀನ್ ಗೆ ಹೇಳಿ ಕೊಲೆಗೆ ಸುಪಾರಿ ಕೊಟ್ಟಿದ್ದಳು.

ಸಬ್ಸಿಡಿ ನವೀನ

ಅದರಂತೆ ಘಟನೆಯ ದಿನ ನವೀನ್ ತನ್ನ ಸಹಚರರೊಂದಿಗೆ ಸೇರಿಕೊಂಡು ಆನಂದ್ ನನ್ನು ದಾರಿ ಮಧ್ಯೆ ಕೊಂದು ಹಾಕಿದ್ದರು. ಸದ್ಯ ಆರೋಪಿಗಳ ಬಂಧನವಾಗಿದ್ದು, ಹೆಚ್ಚಿನ ಮಾಹಿತಿ-ಸಾಕ್ಷ್ಯ ಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.