Home Interesting ಮಗನ ಶಿಕ್ಷಣಕ್ಕೆ ದುಡ್ಡು ನೀಡಿಲ್ಲವೆಂದು ಪುತ್ರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

ಮಗನ ಶಿಕ್ಷಣಕ್ಕೆ ದುಡ್ಡು ನೀಡಿಲ್ಲವೆಂದು ಪುತ್ರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

Hindu neighbor gifts plot of land

Hindu neighbour gifts land to Muslim journalist

ಎಂತಹ ಕಾಲ ಬಂತೆಂದರೆ ದುಡ್ಡಿಗಾಗಿ ಪೋಷಕರನ್ನೇ ಕೊಲ್ಲುವಂತಹ ಕಲಿಯುಗಕ್ಕೆ.ಆದ್ರೆ ಇಲ್ಲಿ ನಡೆದ ಘಟನೆಗೆ ಅಮ್ಮನೇ ಸಾಥ್!ಹೌದು.ಮಗನ‌ ಶಿಕ್ಷಣಕ್ಕೆ ದುಡ್ಡು ಕೊಟ್ಟಿಲ್ಲ ಎಂದು ಮಗನ ಜೊತೆ ಸೇರಿ ಪತ್ನಿಯೇ ಪತಿಯನ್ನ ಕೊಂದ ಘಟನೆ ಮುಂಬೈನ‌ ಅಂಬೋಲಿಯಲ್ಲಿ ನಡೆದಿದೆ.

ಸಂತಾನ ಕೃಷ್ಣನ್ ಅಯ್ಯರ್ ಮೃತರಗಿದ್ದು, ಇವರು ಸರ್ಕಾರಿ ನೌಕರನಾಗಿದ್ದು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಜಿಎಂ ಆಗಿ ಕೆಲಸ ಮಾಡುತ್ತಿದ್ದರು.ಈ ಹಿನ್ನಲೆ ಅವರಿಗೆ ಕ್ವಾಟ್ರಸ್ ಕೂಡ ನೀಡಿದ್ದರು. ಇದೇ ಕ್ವಾಟ್ರಸ್ ನ ಏಳನೇ ಮಹಡಿಯಿಂದ ಮಗ ತಾಯಿ ಸೇರಿ ಕೃಷ್ಣನ್ ಅವರನ್ನ ತಳ್ಳಿ ಕೊಲೆ ಮಾಡಲಾಗಿದೆ.

ಇನ್ನು ಕಳೆದ ವರ್ಷ ಇಂಜೀನಿಯರಿಂಗ್ ಮುಗಿಸಿದ್ದ ಅರವಿಂದ್ ಗೆ ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗುವ ಹಿನ್ನಲೆ ತಂದೆಯ ಬಳಿ ಹಣ ಕೇಳಿದ್ದ . ತಾಯಿ ಕೂಡ ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಸಹಾಯ ಮಾಡುವಂತೆ ಪತಿಯನ್ನ ಕೇಳಿದ್ಲು. ಆದ್ರೆ ಅದನ್ನ ನಿರಾಕರಿಸಿದ ಹಿನ್ನಲೆ ಈ ಕೃತ್ಯ ಎಸಗಿದ್ದಾರೆ.

ಈ ವೇಳೆ ತಂದೆಯ ಮೇಲೆ ಮಗ ಮತ್ತು ಪತ್ನಿ‌ಸೇರಿ ಹಲ್ಲೆ ಮಾಡಿ ಏಳನೆ ಮಹಡಿಯಿಂದ ಬಿಸಾಡಿ ಕೊಂದಿದ್ದು, ಇದೀಗ ತಾಯಿ ,ಮಗ ಇಬ್ಬರನ್ನೂ ಹತ್ಯೆಯ ಆರೋಪದಡಿ ಬಂಧಿಸಲಾಗಿದೆ.