IPL Auction 2022 : ಇಶಾನ್ ಕಿಶನ್ ದುಬಾರಿ ಆಟಗಾರ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲು| ಕರ್ನಾಟಕದ ದೇವದತ್ತ ಪಡೀಕಲ್ ರಾಜಸ್ಥಾನ ತೆಕ್ಕೆಗೆ
ಇಡೀ ಕ್ರಿಕೆಟ್ ಜಗತ್ತನ್ನೇ ತನ್ನ ಕಡೆ ಸೆಳೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ ಗೆ ಭರ್ಜರಿ ಚಾಲನೆ ದೊರಕಿದೆ. ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮ. ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು BCCI ಒಟ್ಟು 590. ಆಟಗಾರರನ್ನು ಮಾತ್ರವೇ ಅಂತಿಮವಾಗಿ ಹರಾಜು ಸುತ್ತಿಗೆ ಪರಿಷ್ಕರಿಸಿದೆ. ಇದರಲ್ಲಿ ಒಟ್ಟು 370 ಭಾರತೀಯ ಆಟಗಾರರಿದ್ದರೆ 220 ವಿದೇಶಿ ಆಟಗಾರರಿದ್ದಾರೆ. ಒಟ್ಟು ವಿಶ್ವದಾದ್ಯಂತ ಐಪಿಎಲ್ ಹರಾಜಿಗಾಗಿ 1214 ಆಟಗಾರರು ಹೆಸರು ನೋಂದಾಯಿಸಿದ್ದರು.
ಇಂದು ನಡೆದ ಮೆಗಾ ಹರಾಜಿನಲ್ಲಿ 97 ಆಟಗಾರರ ಹರಾಜು ನಡೆದಿದೆ. ಭಾನುವಾರ ಭೋಜನ ವಿರಾಮಕ್ಕೂ ಮುನ್ನ 98 ರಿಂದ 161 ನೇ ಆಟಗಾರರ ಹರಾಜು ನಡೆಯಲಿದೆ.
ಈ ಬಾರಿಯ ಐಪಿಎಲ್ ನ ವಿಶೇಷ ಏನೆಂದರೆ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಗೇಂಟ್ಸ್ ಎನ್ನುವ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿರುವುದು.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬಹಳ ಕುತೂಹಲ ಮೂಡಿಸಿದ ಆಟಗಾರ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ತನ್ನದಾಗಿಸಿಕೊಂಡಿದೆ. ಅಂಡರ್ 19 ಪಂದ್ಯದಲ್ಲಿ ಭಾರತವನ್ನು ಮುನ್ನೆಲೆಯಲ್ಲಿ ಇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಡಗೈ ಆಟಗಾರ ಇಶಾನ್ ಕಿಶನ್. ದಿನೇಶ್ ಕಾರ್ತಿಕ್ ಅವರಂತಹ ಪ್ರತಿಭಾನ್ವಿತ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5.50 ಕೋಟಿಗೆ ಖರೀದಿಸಿದೆ. ಶ್ರೇಯಸ್ ಅಯ್ಯರ್ 12.25 ಕೋಟಿ ಮೊತ್ತಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಆರ್ ಸಿ ಬಿ 10.75 ಕೋಟಿ ನೀಡಿ ತನ್ನದಾಗಿಸಿಕೊಂಡಿದೆ.
ಬೆಳಿಗ್ಗೆ ಆರಂಭಗೊಂಡ ಹರಾಜು ಪ್ರಕ್ರಿಯೆಯ ಮಧ್ಯಭಾಗದಲ್ಲಿ ಶ್ರೀಲಂಕಾದ ಬೌಲರ್ ಹಸರಂಗ ಅವರ ಬಿಡ್ ಕೂಗುವಾಗ ಹರಾಜುಗಾರ ಹಗ್ ಎಡಮೆಡ್ಸ್ ವೇದಿಕೆಯಲ್ಲೇ ಕುಸಿದು ಬಿದ್ದರು. ಹಾಗಾಗಿ ಕೆಲಕಾಲ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. 12.25 ಕೋಟಿ ಪಡೆದ ಶ್ರೇಯಸ್ಸ್ ಅಯ್ಯರ್ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರನೆನಿಸಿದ್ದಾರೆ.
ಎರಡನೇ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ಹರ್ಷಲ್ ಪಟೇಲ್ 10.75 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. 9.25 ಕೋಟಿ ಕೊಟ್ಟು ಪಂಜಾಬ್ ಕಿಂಗ್ಸ್ ದಕ್ಷಿಣ ಆಫ್ರಿಕಾದ ಬೌಲರ್ ಕಗ್ಗಿಸೋ ರಬಾಡ ಅವರನ್ನು ತನ್ನದಾಗಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕರ್ನಾಟಕದ ದೇವದತ್ತ ಪಡೀಕಲ್ 7.75 ಕೋಟಿ ಮೊತ್ತಕ್ಕೆ ಸೇರಿದ್ದಾರೆ. ರಾಬಿನ್ ಉತ್ತಪ್ಪ ಹಾಗೂ ಜಾಸನ್ ರಾಯ್ ಅತೀ ಕಡಿಮೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. ತಲಾ ಎರಡು ಕೋಟಿ ಮೊತ್ತಕ್ಕೆ ಚೆನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ಜೊತೆಯಾಗಿದ್ದಾರೆ. ಈ ತನಕ ಮಾರಾಟವಾಗದೇ ಉಳಿದ ಆಟಗಾರರೆಂದರೆ ಸುರೇಶ್ ರೈನಾ, ದಕ್ಷಿಣಾ ಆಫ್ರಿಕಾದ ದೈತ್ಯ ಆಟಗಾರ ಸ್ಟಿವನ್ ಸ್ಮಿತ್, ಶಖಿಬ್ ಹಾಸನ್.
ಭಾರತದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇರಿದ್ದಾರೆ. 10.75 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಮೊದಲು ಚೆನ್ನೈ ಟೀಮ್ ನ ಭಾಗವಾಗಿದ್ದರು ಶಾರ್ದೂಲ್.